Saturday, May 28, 2022
Powertv Logo
Homeಸಿನಿಮಾಕಾಣೆಯಾದವರ ಬಗ್ಗೆ ವಿಜಯ್, ಡಾಲಿ ಪ್ರಕಟಣೆ ..!

ಕಾಣೆಯಾದವರ ಬಗ್ಗೆ ವಿಜಯ್, ಡಾಲಿ ಪ್ರಕಟಣೆ ..!

ಸ್ಯಾಂಡಲ್​ವುಡ್​ನಲ್ಲಿ ಮೂಡಿಬರ್ತಿರೋ ವಿಭಿನ್ನ ಸಿನಿಮಾಗಳ ಸಾಲಿಗೆ ಇದೀರ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾ ಕೂಡ ಸೇರಿಕೊಳ್ತಿದೆ. ಈ ಚಿತ್ರಕ್ಕೆ ಸ್ಯಾಂಡಲ್​ವುಡ್​ ಸಲಗ ವಿಜಯ್​ ಹಾಗೂ ಡಾಲಿ ಧನಂಜಯ್ ಕೂಡ ಸಾಥ್​ ನೀಡಿದ್ದಾರೆ.

ಕಾಣೆಯಾದವರ ಬಗ್ಗೆ ಪ್ರಕಟಣೆ… ಇಂತಹದ್ದೊಂದು ವಿಭಿನ್ನ ಟೈಟಲ್​ನಲ್ಲಿ ಸಿನಿಮಾವೊಂದು ಸದ್ಯ ಸ್ಯಾಂಡಲ್​ವುಡ್​ನಲ್ಲಿ ಮೂಡಿಬರ್ತಿದೆ. ರಂಗಾಯಣ ರಘು, ರವಿಶಮಖರ್​, ತಬಲ ನಾಣಿ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ತಂದೆ ತಾಯಿ ಮಹತ್ವ, ಪ್ರಾಯದ ಸೆಳೆತ, ಲವ್ ಸ್ಟೋರಿ, ಆಕ್ಷನ್ ಮಿಶ್ರಿತ ಕಥೆಯನ್ನೊಳಗೊಂಡಿರೋ ಸಿನಿಮಾ ಇದಾಗಿದ್ದು ಅನಿಲ್ ಕುಮಾರ್ ಆ್ಯಕ್ಷನ್ ಕಟ್​ ಹೇಳಿದ್ದಾರೆ.

ಸದ್ಯ ಈ ಸಿನಿಮಾದ ಟ್ರೈಲರ್​​ ರಿವೀಲ್ ಆಗಿದೆ. ಈ ಚಿತ್ರದ ಸುದ್ದಿಗೋಷ್ಟಿಗೆ ಡಾಲಿ ಧನಂಜಯ್, ದುನಿಯಾ ವಿಜಯ್ ಹಾಗೂ ದೊಡ್ಮನೆ ಕುಡಿ ಧಿರೇನ್​ ರಾಮ್​ಕುಮಾರ್​​ ಮುಖ್ಯ ಅತಿಥಿಗಳಾಗಿ ಬಂದು ಟ್ರೈಲರ್​ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾದಲ್ಲಿ ಆಶಿಕಾ ರಂಗನಾಥ್​​, ಚಿಕ್ಕಣ್ಣ, ತಿಲಕ್​, ಸಂಪದ ಗೌಡ ಕೂಡ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಈ ಕಾರ್ಯಕ್ರಮದ ವೇದಿಕೆ ಮೇಲೆ ರಂಗಾಯಣ ರಘು, ತಬಲಾ ನಾಣಿ ಹಾಗೂ ರವಿಶಂಕರ್ ಕೈದಿಗಳಂತೆ ವಿಭಿನ್ನವಾಗಿ ಎಂಟ್ರಿ ನೀಡಿ ಪ್ರೇಕ್ಷಕರ ಗಮನ ಸೆಳೆದ್ರು. ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್​ ಮಾಡಿದ್ದಾರೆ. ಜಿತೇಂದ್ರ ಮಂಜುನಾಥ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾಣೆಯಾದವರ ಬಗ್ಗೆ ಪ್ರಕಟಣೆ ಚಿತ್ರದ ಟ್ರೈಲರ್​ ಸಾಕಷ್ಟು ಕುತೂಹಲ ಮೂಡಿಸಿದ್ದು, ಮುಂದಿನ ತಿಂಗಳು ಚಿತ್ರ ರಿಲೀಸ್​ ಆಗಲಿದೆ.

- Advertisment -

Most Popular

Recent Comments