ಕಂಪ್ಲಿ ಶಾಸಕ ಗಣೇಶ್ ಅರೆಸ್ಟ್..!

0
238

ರಾಮನಗರ : ವಿಜಯನಗರ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿ ತಲೆ ಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಅರೆಸ್ಟ್ ಆಗಿದ್ದಾರೆ.
ರಾಮನಗರದ ಜಿಲ್ಲೆಯ ಬಿಡದಿ ಠಾಣಾ ಪೊಲೀಸರು ಗುಜರಾತ್​ನಲ್ಲಿ ಎಂಎಲ್ ಎ ಗಣೇಶ್ ಅವರನ್ನು ಬಂಧಿಸಿ ರಾಜ್ಯಕ್ಕೆ ಕರೆತರುತಿದ್ದಾರೆ.
ಈಗಲ್ ಟನ್ ರೆಸಾರ್ಟ್ ನಲ್ಲಿ ಜನವರಿ 19ರಂದು ಶಾಸಕ ಆನಂದ್ ಸಿಂಗ್ ಮೇಲೆ ಬಾಟಲಿಯಿಂದ‌ ಮಾರಣಾಂತಿಕ ಹಲ್ಲೆ ನಡಿಸಿದ್ದ ಆರೋಪ ಗಣೇಶ್ ಅವರ ಮೇಲಿದ್ದು, ಘಟನೆ ಬಳಿಕ ಗಣೇಶ್ ನಾಪತ್ತೆಯಾಗಿದ್ದರು. ಇದೀಗ 1 ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾಂಗ್ರೆಸ್ ಶಾಸಕರು ಪರಸ್ಪರ ಹೊಡೆದಾಡಿಕೊಂಡಿದ್ದು ಕಾಂಗ್ರೆಸ್ ಗೆ ತೀವ್ರ ಮುಜುಗರವನ್ನುಂಟು‌ ಮಾಡಿತ್ತು. ಕಾಂಗ್ರೆಸ್ ನಾಯಕರು ಇಬ್ಬರು ಶಾಸಕರ ನಡುವೆ ಸಂದಾನ ಯತ್ನವನ್ನೂ ಮಾಡಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ.
ಹೇಗಾದ್ರು ಮಾಡಿ ಕೇಸ್ ಹಿಂಪಡೆಯುವಂತೆ ಆನಂದ್​ ಸಿಂಗ್ ಅವರ ಮನವೊಲಿಸಿ ಅಂತ ಗಣೇಶ್ ಕಾಂಗ್ರೆಸ್​ ನಾಯಕರಲ್ಲಿನ ಮನವಿ ಮಾಡಿದ್ದಾರೆ ಎಂದೂ ಹೇಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ರಮೇಶ್ ಜಾರಕಿಹೊಳಿ ಆನಂದ್​ ಸಿಂಗ್ ಅವರ ಮನವೊಲಿಸಿ ಕೇಸ್​ ವಾಪಸ್ಸು ಪಡೆಯುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿತ್ತು.
ರಮೇಶ್ ಜಾರಕಿಹೊಳಿ ಅವರು ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ರಾಜಕಾರಣಿಗಳಿಂದ ಮನವೊಲಿಕೆ ಕಷ್ಟ ಅಂತ ಮಾಜಿ ಸಿಎಂ ಸ್ವಾಮೀಜಿ ಮೂಲಕ ಆನಂದ್​ ಸಿಂಗ್ ಮನವೊಲಿಕೆಗೆ ಯತ್ನಿಸಬಹುದು ಅಂತ ಸಲಹೆ ನೀಡಿದ್ದಾರೆಂಬ ಮಾತು ಇತ್ತು. ಆನಂದ್​ ಸಿಂಗ್ ಅವರು ಪ್ರಸನ್ನಾನಂದ ಶ್ರೀಗಳ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದು, ಅವರ ಮೂಲಕ ಆನಂದ್​ ಸಿಂಗ್ ಅವರ ಮನವೊಲಿಸಬಹುದು ಅನ್ನೋದು ಸಿದ್ದರಾಮಯ್ಯ ಅವರ ಪ್ಲಾನ್. ಹೀಗಾಗಿ ಕಾಂಗ್ರೆಸ್ ನಾಯಕರು ಪ್ರಸನ್ನಾ ನಂದ ಶ್ರೀಗಳ ಮೂಲಕ ಆನಂದ್​ ಸಿಂಗ್ ಅವರ ಮನವೊಲಿಸುವ ಯತ್ನ ಮಾಡಿದ್ದು, ಶ್ರೀಗಳು ಕೂಡ ಭರವಸೆ ನೀಡಿದ್ದಾರೆ ಎಂದು ಇಂದು ಬೆಳಗ್ಗೆಯಷ್ಟೇ ವರದಿಯಾಗಿತ್ತು.

ಇನ್ನು ನಿನ್ನ ಗಣೇಶ್ ಅವರ ಕುಟುಂಬವನ್ನು ಭೇಟಿ ಮಾಡಿ ಮಾತನಾಡಿದ್ದ ಶಾಸಕ ರಮೇಶ್ ಜಾರಕಿಹೊಳಿ, ಗಣೇಶ್ ಸಚಿವರೂ ಆಗುತ್ತಾರೆ ಅಂದಿದ್ದರು.

LEAVE A REPLY

Please enter your comment!
Please enter your name here