ಪರಪ್ಪನ ಅಗ್ರಹಾರಕ್ಕೆ ಕಂಪ್ಲಿ ಶಾಸಕ

0
221

ಬೆಂಗಳೂರು: ವಿಜಯನಗರ ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕಂಪ್ಲಿ ಶಾಸಕ ಜೆ.ಎನ್ ಗಣೇಶ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬೆಂಗಳೂರಿನ​​ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಜನವರಿ 20ರಂದು ಈಗಲ್​ಟನ್​ ರೆಸಾರ್ಟ್​​ನಲ್ಲಿ ವಿಜಯನಗರ ಶಾಸಕ ಆನಂದ್​ ಸಿಂಗ್​ ಮೇಲೆ ಬಾಟಲ್​​ನಿಂದ ಕಂಪ್ಲಿ ಶಾಸಕ ಗಣೇಶ್​​ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗಣೇಶ್ ಅವ​​ರನ್ನು ರಾಮನಗರ ಪೊಲೀಸರು ನಿನ್ನೆ ಗುಜರಾತ್​​ನ ಸೋಮನಾಥದಲ್ಲಿ ಬಂಧಿಸಿದ್ದರು. ಅವರನ್ನು ಇಂದು ಬೆಂಗಳೂರಿಗೆ ಕರೆತರಲಾಗಿದ್ದು, ರಾಮನಗರ ಕೋರ್ಟ್​​ಗೆ ಹಾಜರುಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಜೆಎಂ ಕೋರ್ಟ್​  ಗಣೇಶ್​​ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

LEAVE A REPLY

Please enter your comment!
Please enter your name here