ಕಂಪ್ಲಿ ಶಾಸಕ ಗಣೇಶ್​ ವಿಚಾರಣಾಧೀನ ಕೊಠಡಿಗೆ ಶಿಫ್ಟ್..?

0
204

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ಕಂಪ್ಲಿ ಶಾಸಕ ಜೆ.ಎನ್​ ಗಣೇಶ್ ಅವರನ್ನು ಇಂದು ವಿಚಾರಣಾಧೀನ ಕೊಠಡಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಗಣೇಶ್ ಪರ ವಕೀಲರಾದ ಸಿ.ಹೆಚ್​.ಹನುಮಂತರಾಯಪ್ಪ ಇಂದು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಗಣೇಶ್ ಪರ ವಕೀಲರಾದ ಸಿ.ಹೆಚ್​.ಹನುಮಂತರಾಯಪ್ಪ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಆರೋಪಿ ಗಣೇಶ್ ಅವರ ವಿರುದ್ಧ ಸೆಕ್ಷನ್ 307ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿರೋದ್ರಿಂದ ತಕ್ಷಣ  ಜಾಮೀನು ಸಿಗುವುದು ಕಷ್ಟ ಎಂಬ ಮಾತುಗಳೂ ಕೇಳಿ ಬರ್ತಿದೆ. ಗಣೇಶ್ ಅರ್ಜಿಗೆ ಸರ್ಕಾರಿ ಪರ ವಕೀಲರು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಒಂದು ವೇಳೆ ಜಾಮೀನು ನಿರಾಕರಣೆಯಾದ್ರೆ ಹೈಕೋರ್ಟ್​ ಮೊರೆಹೋಗುವ ಅವಕಾಶವೂ ಇದೆ.

LEAVE A REPLY

Please enter your comment!
Please enter your name here