ಬೆಂಗಳೂರಿಗೆ ಬರುತ್ತಲೇ ಕಣ್ಣೀರಿಟ್ಟ ಎಂಎಲ್​​ಎ ಕಂಪ್ಲಿ ಗಣೇಶ್​..!

0
230

ಬೆಂಗಳೂರು : ವಿಜಯನಗರ ಶಾಸಕ ಆನಂದ್​ ಸಿಂಗ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗುಜರಾತ್​ನಲ್ಲಿ ಅರೆಸ್ಟ್​ ಆಗಿದ್ದ ಕಂಪ್ಲಿ ಶಾಸಕ ಜೆ.ಎನ್​ ಗಣೇಶ್ ಅವರನ್ನು ಬಿಡದಿ ಪೊಲೀಸ್​ ಠಾಣೆಗೆ ಕರೆತರಲಾಗಿದೆ.
ಬೆಳಗ್ಗೆ 5.50ಕ್ಕೆ ಅಹಮದಾಬಾದ್​ನಿಂದ ಹೊರಟ ಸ್ಪೈಸ್​ ಜೆಟ್​ ವಿಮಾನದಲ್ಲಿ ಬೆಂಗಳೂರಿಗೆ ಗಣೇಶ್ ಅವರನ್ನು ಕರೆತರಲಾಗಿದ್ದು, ಏರ್​ಪೋರ್ಟ್​ನಿಂದ ನೈಸ್​ ರೋಡ್ ಮೂಲಕ ಬಿಡದಿ ಠಾಣೆಗೆ ಕರೆದೊಯ್ಯಲಾಗಿದೆ. ಬೆಂಗಳೂರಿಗೆ ಬರುತ್ತಲೇ ಗಣೇಶ್ ಕಣ್ಣೀರು ಹಾಕಿದ್ದಾರೆ. ವಿಮಾನ ನಿಲ್ದಾಣದಲ್ಲೇ ಕಣ್ಣೀರಿಟ್ಟ ಗಣೇಶ್ ಏರ್​ಪೋರ್ಟ್​ ಲಾಂಜ್​​ನಲ್ಲೇ ಮುಖ ತೊಳೆದು ಹೊರಬಂದಿದ್ದಾರೆ. ಸದ್ಯ ಬಿಡದಿಯಲ್ಲಿ ಗಣೇಶ್ ಅವರ ವಿಚಾರಣೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here