Home ರಾಜ್ಯ ಬೆಂಗಳೂರು ಉರಗ ಪ್ರೇಮಿ ಮೇಲೆ ಕಾಳಿಂಗ ಸರ್ಪ ಅಟ್ಯಾಕ್ - ಜಸ್ಟ್ ಮಿಸ್...!

ಉರಗ ಪ್ರೇಮಿ ಮೇಲೆ ಕಾಳಿಂಗ ಸರ್ಪ ಅಟ್ಯಾಕ್ – ಜಸ್ಟ್ ಮಿಸ್…!

ಶಿವಮೊಗ್ಗ : ಕಾಳಿಂಗನ ಕಡಿತದಿಂದ ಉರಗ ಪ್ರೇಮಿಯೊಬ್ಬರು ಜಸ್ಟ್  ಮಿಸ್ ಆಗಿ ಜೀವ ಉಳಿಸಿಕೊಂಡಿರುವ ಘಟನೆ ನಡೆದಿದೆ. ಹಾವನ್ನು ಹಿಡಿಯಲು ಹೋಗಿದ್ದ ಉರಗ ಪ್ರೇಮಿಗೆ ಕಾಳಿಂಗ ಸರ್ಪ ತಿರುಗಿ ಬಿದ್ದು ಅಟ್ಯಾಕ್ ಮಾಡಲು ಯತ್ನಿಸಿದೆ. ರಿಪ್ಪನಪೇಟೆ ಬಳಿಯ ಚಿಕ್ಕಜೇನಿ ಗ್ರಾಮದ ಸ್ನೇಕ್ ಪ್ರಭಾಕರ್ ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿರುವ ಉರಗ ಪ್ರೇಮಿಯಾಗಿದ್ದಾರೆ. 

ಈಗಾಗಲೇ ನೂರಾರು ಹಾವುಗಳನ್ನು ಹಿಡಿದು ರಕ್ಷಣೆ ಮಾಡುತ್ತಿರುವ ಪ್ರಭಾಕರ್ ಅವರಿಗೆ ಹಿಂದೆಂದೂ ಈ ರೀತಿಯ ಅನುಭವ ಆಗಿರಲಿಕ್ಕಿಲ್ಲ. ಅಂದಹಾಗೆ ಕೋಡೂರು ಗ್ರಾಪಂ ವ್ಯಾಪ್ತಿಯ ಮತ್ತಿಘಟ್ಟ ಎಂಬಲ್ಲಿ ಗ್ರಾಮಸ್ಥರೊಬ್ಬರ ಮನೆಯ ಬಳಿ ಬಂದಿದ್ದ ಕಾಳಿಂಗ ಸರ್ಪ ಹಿಡಿಯಲು ಹೋದಾಗ ತಪ್ಪಿಸಿಕೊಂಡು ತೋಟದ ನಡುವೆ ಇದ್ದ ಕೆರೆಗೆ ಈ ಹಾವು ಹೋಗಿದೆ.  ಈ ವೇಳೆ ಕಾಳಿಂಗವನ್ನು ನೀರಿನಿಂದ ಮೇಲೆತ್ತಿ ಹಿಡಿಯಲು ಹೋದಾಗ ಈ ಘಟನೆ ನಡೆದಿದ್ದು. ಈ ಕಾಳಿಂಗ ಬಳಿಕ ಕಾಲಿಗೆ ಕಡಿಯಲು ಮುಂದಾಗಿದ್ದ ಸರ್ಪ ಇನ್ನೇನು ಮುಖಕ್ಕೆ ಕಚ್ಚಬೇಕು ಎನ್ನುವಷ್ಟರಲ್ಲಿ ಕಾಳಿಂಗನ ತಲೆ ಹಿಡಿದುಕೊಂಡಿದ್ದಾರೆ ಸ್ನೇಕ್ ಪ್ರಭಾಕರ್ ಸ್ವಲ್ಪ ಮೈಮರೆತಿದ್ದರೂ ಈ ಹಾವಿನ ಕಡಿತ ಪ್ರಾಣಕ್ಕೆ ಅಪಾಯವಾಗುತ್ತಿತ್ತು. 

ಇದನ್ನು ಗಮನಿಸಿದ ಅವರು ಹರಸಾಹಸ ಪಟ್ಟು ಸುರಕ್ಷಿತವಾಗಿ ಹಾವನ್ನು ಸೆರೆ ಹಿಡಿದು ಸ್ಥಳೀಯರ ನೆರವಿನಿಂದ ಗೋಣಿಚೀಲದಲ್ಲಿ ತುಂಬಿ ಹಾವನ್ನು ರಕ್ಷಿಸಿ ಸಮೀಪದ ಕಾಡಿಗೆ ಬಿಟ್ಟು ಉರಗ ಪ್ರೇಮಿ ಸ್ನೇಕ್ ಪ್ರಭಾಕರ್ ನಿಟ್ಟುಸಿರು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments