‘ಕೊರೋನಾ ರಣಕೇಕೆ ಮಧ್ಯೆ ಇದೀಗ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳ ಹಾವಳಿಯಿಂದ ರೋಗಿಗಳು ಬೆಚ್ಚಿಬಿದ್ದಿದಾರೆ.. ನಗರದ ಜಿಮ್ಸ್ ಕೋವಿಡ್ ಆಸ್ಪತ್ರೆ ಕಟ್ಟಡಕ್ಕೆ ಹೊಂದಿಕೊಂಡಿರುವ ಈ ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳು ಹಿಂಡು ಹಿಂಡಾಗಿ ಮೊದಲ ಮಹಡಿಯಲ್ಲಿ ರಾಜರೋಷವಾಗಿ ತಿರುಗಾಡುತ್ತವೆ.. !
ಆತಂಕಕಾರಿ ವಿಷಯವೇನಂದ್ರೆ ಇದೇ ಮೊದಲ ಮಹಡಿಯಲ್ಲಿ ಹೆರಿಗೆ ವಾಡ್೯ ಮತ್ತು ಶಿಶುಗಳ ಆರೈಕೆ ಮಾಡುವ ವಿಶೇಷ ವಾಡ್೯ ಇದೆ. ಆದರೂ ಸಹ ಇಲ್ಲಿಯ ವೈದ್ಯರು ಮತ್ತು ಸಿಬ್ಬಂದಿ ಕಣ್ಣಿಗೆ ಹಂದಿಗಳ ಹಿಂಡು ಕಾಣುತ್ತಿಲ್ಲವೇ ಎಂಬ ಆಕ್ರೋಶ ವ್ಯಕ್ತವಾಗ್ತಿದೆ..
ಒಂದು ಕಡೆ ಕೊರೋನಾದಿಂದ ಆತಂಕದಲ್ಲಿರೋ ಜನ, ಜಿಲ್ಲಾಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುವ ಪರಿಸ್ಥಿತಿ ಮಧ್ಯೆ, ಹಂದಿಗಳನ್ನ ಕಂಡು ಬೆಚ್ಚಿಬೀಳ್ತಿದಾರೆ. ಜಿಲ್ಲಾಸ್ಪತ್ರೆಯಿಂದ ಕೇವಲ 10 ಮೀಟರ್ ಅಂತರದಲ್ಲಿ ಜಿಮ್ಸ್ ಕೋವಿಡ್ 19 ಆಸ್ಪತ್ರೆವಿದ್ದು, ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆ ವ್ಯಕ್ತವಾಗ್ತಿದೆ. ಕಳೆದ ವರ್ಷವಷ್ಟೇ ಸರ್ಕಾರದಿಂದ ಎ ಗ್ರೇಡ್ ಮಾನ್ಯತೆ ಪಡೆದಿದ್ದ ಕಲಬುರಗಿ ಜಿಲ್ಲಾಸ್ಪತ್ರೆಯ ಕರ್ಮಕಾಂಡ ಇಲ್ಲಿನ ಅಧಿಕಾರಿಗಳ ಬೇಜವಬ್ದಾರಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಜಿಲ್ಲಾಸ್ಪತ್ರೆ ಆಡಳಿತ ಮಂಡಳಿ, ಪಾಲಿಕೆ, ಜಿಲ್ಲಾ ಆರೋಗ್ಯ ಇಲಾಖೆ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಬೇಕೆಂಬ ಕೂಗು ಕೇಳಿ ಬರ್ತಿದೆ..