ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಸರ್ಕಾರಿ ಬಸ್​..!

0
214

ಕಲಬುರ್ಗಿ : ಚಾಲಕನ ನಿಯಂತ್ರಣ ತಪ್ಪಿ ಬಸ್​ವೊಂದು ಮನೆಯೊಂದಕ್ಕೆ ನುಗ್ಗಿದ ಘಟನೆ ಕಲಬುರ್ಗಿ ತಾಲೂಕಿನ ಹಡಗಿಲ್​ ಹಾರತಿ ಗ್ರಾಮದ ಬಳಿ ನಡೆದಿದೆ.
ಇಂದು ಬೆಳಗಿನ ಜಾವ ಗಂಟೆ ಸುಮಾರಿಗೆ ಎನ್​ಇಕೆಆರ್​ಟಿಸಿ ಶ್ರೀಮಂತ್​ ಅನ್ನೋರ ಮನೆಗೆ ಏಕಾಏಕಿ ನುಗ್ಗಿದೆ. ಆ ವೇಳೆ ಮನೆಯಲ್ಲಿ ಎಲ್ಲರೂ ಮಲಗಿದ್ದರು. ಆದರೆ, ಅದೃಷ್ಟವಶಾತ್ ಬಸ್​ ನುಗ್ಗಿದ ಜಾಗದಲ್ಲಿ ಯಾರೂ ಮಲಗಿರಲಿಲ್ಲ. ಘಟನೆಯಲ್ಲಿ ಬಸ್​ನಲ್ಲಿದ್ದ ಡ್ರೈವರ್ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್​ ಮದುವೆ ಸಮಾರಂಭಕ್ಕೆಂದು ವಿಜಯಪುರ ಜಿಲ್ಲೆಯ ಸಿಂದಗಿಯಿಂದ ಬೀದರ್​ಗೆ ತೆರಳುತ್ತಿತ್ತು.

LEAVE A REPLY

Please enter your comment!
Please enter your name here