Home P.Special ಶಿಕಾರಿಪುರದ ಮಾರವಳ್ಳಿಯಲ್ಲಿ ಕದಂಬರ ಕಾಲದ ನರಸಿಂಹ ಶಿಲ್ಪ ಪತ್ತೆ !

ಶಿಕಾರಿಪುರದ ಮಾರವಳ್ಳಿಯಲ್ಲಿ ಕದಂಬರ ಕಾಲದ ನರಸಿಂಹ ಶಿಲ್ಪ ಪತ್ತೆ !

ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರದ ಮಾರವಳ್ಳಿಯಲ್ಲಿ, ಭಯ ಹುಟ್ಟಿಸುವಂತಹ ನರಸಿಂಹ ಶಿಲ್ಪ ಪತ್ತೆಯಾಗಿದೆ. ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ್ ಮತ್ತು ಅವರ ತಂಡ ಕಾರ್ಯಕ್ಷೇತ್ರ ಕೈಗೊಂಡಾಗ ಈ ಶಿಲ್ಪ ಪತ್ತೆಯಾಗಿದೆ. ಈ ಮಾರವಳ್ಳಿ ಗ್ರಾಮದ ಬೆಟ್ಟದ ಮೇಲೆ ಶ್ರೀ ಹುಲಿಸಿದ್ದೇಶ್ವರ ದೇವರು ಎಂದು ಸ್ಥಳೀಯರು ಕರೆಯುವ ನರಸಿಂಹ ಶಿಲ್ಪವು ಪತ್ತೆಯಾಗಿದ್ದು, ಇದು ಸುಮಾರು ಎರಡು ಅಡಿ ಎತ್ತರ, ಒಂದು ಅಡಿ ಅಗಲ ಹಾಗೂ ನಾಲ್ಕು ಅಡಿ ಸುತ್ತಳತೆಯನ್ನು ಹೊಂದಿದೆ. ಇನ್ನು ಈ ನರಸಿಂಹ ಶಿಲ್ಪ ವಿಶೇಷವಾಗಿದ್ದು, ಈ ಶಿಲ್ಪವನ್ನು ನೋಡಿದರೆ ಭಯ ಸೃಷ್ಟಿಸುವಂತೆ ಕಂಡುಬರುತ್ತದೆ. ಇದು ಮುಂಗಾಲುಗಳನ್ನು ಹಾಗೂ ಹಿಂಗಾಲನ್ನು ಊರಿ ಶಕ್ತಿಯುತವಾಗಿ ಕುಳಿತಿರುವುದು ಕಂಡುಬರುತ್ತದೆ. ಎರಡೆರಡು ಕೋರೆ ಹಲ್ಲುಗಳನ್ನು ಹಾಗೂ ಕೆಳ ದವಡೆಯಲ್ಲಿ ಹಲ್ಲುಗಳನ್ನು ಹೊಂದಿರುವುದು ಸಷ್ಟವಾಗಿ ಗೋಚರವಾಗುತ್ತಿದೆ. ಮೀಸೆಯನ್ನು ಹೊಂದಿದ್ದು ಕಣ್ಣುಗಳು ಹಾಗೂ ಮೂಗುಗಳು ಉಬ್ಬಿದ್ದು ಆಕರ್ಷಣೆಯಿಂದ ಕೂಡಿದೆ. ಮುಂಭಾಗದ ಕಾಲುಗಳನ್ನು ಬಿಗಿಯಾಗಿ ಉರಿದ್ದು, ಕಾಲು ಬೆರಳುಗಳನ್ನು ಹೊಂದಿದೆ.

ಇನ್ನು ಈ ಶಿಲ್ಪಕ್ಕೆ ಇತ್ತೀಚೆಗೆ ಸುಮಾರು 200 ವರ್ಷಗಳ ಹಿಂದೆ ಸ್ಥಳೀಯವಾಗಿ ಸಿಗುವ ಕಲ್ಲುಗಳಿಂದ ಚಿಕ್ಕ ದೇವಾಲಯವನ್ನು ನಿರ್ಮಾಣಮಾಡಿ ಸುತ್ತಲೂ ಸ್ಥಳೀಯವಾದ ಕಾಡುಗಲ್ಲುಗಳಿಂದ ಪೌಳಿ ನಿರ್ಮಾಣ ಮಾಡಿರುವುದು ಕಂಡುಬರುತ್ತಿದೆ. ಅಂದಹಾಗೆ, ಈ ನರಸಿಂಹ ಶಿಲ್ಪವನ್ನು ಕ್ರಿ.ಶ. 3 ಮತ್ತು 4 ನೇ ಶತಮಾನದ ಕದಂಬರ ಕಾಲದ ಶಿಲ್ಪವೆಂದು ಹೇಳಬಹುದಾಗಿದೆ. ಮಳವಳ್ಳಿಯ ಶಿವಸ್ಕಂದವರ್ಮನ ಶಾಸನದಲ್ಲಿ ಶ್ರೀ ನರಸಿಂಹ ಶಿಲ್ಪ ದೊರೆತಿರುವ ಸ್ಥಳದಿಂದ ಎರಡು ಕಿ.ಮೀ ಅಂತರದಲ್ಲಿ ಇರುವ ಮತ್ತಿ ಕೋಟೆಯನ್ನು ಮರಿಯಾಸ ಎಂದು ಕರೆಯಲಾಗಿದೆ ಎಂದು ಇತಿಹಾಸ ತಜ್ಱರಾದ ಡಾ.ಜಗದೀಶ ಹಾಗೂ ಸಾಮಕ್ ಅಭಿಪ್ರಾಯಪಟ್ಟಿದ್ದಾರೆ. ಈಗ ಇದನ್ನು ಮತ್ತಿಕಟ್ಟೆ ಎಂದು ಕರೆಯಲಾಗಿದ್ದು , ಈ ಶಿಲ್ಪವು ಅದರ ಸಮೀಪವೇ ದೊರೆತಿರುವುದರಿಂದ ಈ ಸ್ಥಳವು ಕದಂಬರ ಕಾಲವೆಂದು ಹೇಳಲಾಗುತ್ತಿದೆ. ಈ ಬೆಟ್ಟವು ಅರಣ್ಯಪ್ರದೇಶವಾಗಿದ್ದರಿಂದ ಪಶ್ಚಿಮಘಟ್ಟದಲ್ಲಿ ಹುಲಿಗಳು ಹೆಚ್ಚಾಗಿ ಇರುವುದರಿಂದ ಹುಲಿ ಮುಖದ ನರಸಿಂಹ ಶಿಲ್ಪಗಳ ಆರಾಧನೆ ಕಂಡುಬಂದಿದ್ದು, ಇದು ಪ್ರಕೃತಿ ದೇವತೆಯ ಸಂರಕ್ಷಣೆ ಹಾಗೂ ಗೋವು ಹಾಗೂ ಮಾನವರ ಸಂರಕ್ಷಣೆಯ ಸಂಕೇತವೆನ್ನಬಹುದು ಎಂದು ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments