ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸಬಾಂಬ್‌!

0
1822

ತುಮಕೂರು : ಅತೃಪ್ತ ಶಾಸಕರಲ್ಲೆ ಒಬ್ಬರೇ ಒಬ್ಬರು ವಾಪಸ್‌ ಬರೋದಿಲ್ಲ’ ತುಮಕೂರಿನಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸಬಾಂಬ್‌ ಸಿಡಿಸಿದ್ದಾರೆ. ಮುಂಬೈಗೆ ಇನ್ನೂ ಕೆಲವು ಶಾಸಕರು ಹೋಗುವವರು ಇದ್ದಾರೆ.
‘ಈಗಲೇ ಆ ಹೆಸರುಗಳನ್ನೆಲ್ಲ ಹೇಳಿದ್ರೆ, ಅವರೆಲ್ಲ ಅಲರ್ಟ್‌ ಆಗ್ತಾರೆ ಅನ್ನೋ ಮೂಲಕ ದೋಸ್ತಿ ನಾಯಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಈ ಮೈತ್ರಿ ಸರ್ಕಾರ ಉಳಿಯೋದು ಯಾರಿಗೂ ಕೂಡಾ ಬೇಕಾಗಿಲ್ಲ.
ಕಾಂಗ್ರೆಸ್‌ನಲ್ಲಿ ಕೆಲವೊಬ್ಬರು ಹಾಗೂ ದೇವೇಗೌಡರ ಕುಟುಂಬಕ್ಕೆ ಮಾತ್ರ ಸರ್ಕಾರ ಬೇಕು. ಅದಕ್ಕಿಂತ ಸರ್ಕಾರ ಉರುಳಬೇಕು ಅನ್ನೋದೇ ನನ್ನ ಅಭಿಪ್ರಾಯ ಅಂತಾ ಹೇಳೋ ಮೂಲಕ ಮತ್ತೊಮ್ಮೆ ದೋಸ್ತಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ..

LEAVE A REPLY

Please enter your comment!
Please enter your name here