”ದ್ರಾವಿಡ್​​ ರೀತಿ ರಾಹುಲ್ ಆಗ್ಬೇಕು”..!

0
175

ಲಂಡನ್​ : ವಿಶ್ವಕ್ರಿಕೆಟ್​ ಕಂಡ ಸರ್ವ ಶ್ರೇಷ್ಠ ಕ್ರಿಕೆಟಿಗ ಕನ್ನಡಿಗ ರಾಹುಲ್ ದ್ರಾವಿಡ್. ಇಂದು ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್​ಮನ್​ಗಳಲ್ಲಿಯೂ ರಾಹುಲ್ ಅನ್ನೋ ಹೆಸರದ್ದೇ ಸದ್ದು..! ಕಾಕತಾಳಿಯ ಅನ್ನುವಂತೆ ಈಗಿನ ರಾಹುಲ್ ಕೂಡ ನಮ್ಮ ಕನ್ನಡದವರೇ..!
ಹೌದು, ಟೀಮ್ ಇಂಡಿಯಾದ ಪ್ರಮುಖ ಆಟಗಾರ ಕೆ.ಎಲ್ ರಾಹುಲ್ ಅವರು ರಾಹುಲ್ ದ್ರಾವಿಡ್ ಅವರಂತೆಯೇ ವಿಶ್ವಕ್ರಿಕೆಟ್ ಅನ್ನು ಆಳಬೇಕು ಅನ್ನೋದು ಅಸಂಖ್ಯಾತ ಅಭಿಮಾನಿಗಳ ಆಶಯ. ರಾಹುಲ್ ಕೂಡ ಅದೇ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟು, ಟೀಮ್ ಇಂಡಿಯಾಕ್ಕೆ ಬಹು ದೊಡ್ಡ ಆಸ್ತಿಯಾಗಿ ಉಳಿಯುವ ಸೂಚನೆಯನ್ನು ನೀಡಿದ್ದಾರೆ.
ಟೀಮ್ ಇಂಡಿಯಾದ ಸಹಾಯಕ ಕೋಚ್ ಸಂಜಯ್​ ಬಂಗಾರ್​ ಕೂಡ ರಾಹುಲ್ ಅವರು ರಾಹುಲ್ ದ್ರಾವಿಡ್ ಅವರಂತೆಯೇ ಆಗಬೇಕು ಅಂತ ಆಸೆಪಟ್ಟಿದ್ದಾರೆ. ಕೆ.ಎಲ್ ರಾಹುಲ್ ಅವರು ದ್ರಾವಿಡ್ ಅವರ ರೀತಿ ಬಹುಮುಖ ಪ್ರತಿಭೆ ಆಗಬೇಕು ಎಂದು ಸಂಜಯ್ ಹೇಳಿದ್ದಾರೆ.
ದ್ರಾವಿಡ್ ಟೀಮ್ ಇಂಡಿಯಾದಲ್ಲಿದ್ದಾಗ ಯಾವ್ದೇ ಸ್ಥಾನದಲ್ಲಾದರೂ ಬ್ಯಾಟಿಂಗ್ ಮಾಡ್ತಾ ಇದ್ರು. ಈಗ ಅವರಂತೆ ಕೆ.ಎಲ್ ರಾಹುಲ್ ಕೂಡ ಯಾವ ಸ್ಥಾನಕ್ಕಾದ್ರೂ ಒಗ್ಗಿಕೊಳ್ಳಬಲ್ಲರು ಅಂದಿದ್ದಾರೆ ಸಂಜಯ್ ಬಂಗಾರ್.
ಶಿಖರ್ ಧವನ್ ಗಾಯಗೊಂಡಿರೋ ಹಿನ್ನೆಲೆಯಲ್ಲಿ ಇಂದು ನ್ಯೂಜಿಲೆಂಡ್​​​​​​​ ವಿರುದ್ಧದ ಮ್ಯಾಚ್​ನಲ್ಲಿ ರಾಹುಲ್ ಓಪನರ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ದ್ರಾವಿಡ್ ಕೂಡ ಅನೇಕ ಬಾರಿ ಓಪನರ್ ಆಗಿ ಕಣಕ್ಕಿಳಿದಿದ್ದರು. ಆರಂಭಿಕರಾಗಿ ಆಡುವುದಕ್ಕೂ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋದಕ್ಕೂ ವ್ಯತ್ಯಾಸವಿದೆ. ರಾಹುಲ್​ಗೆ ಈಗ ದ್ರಾವಿಡ್​ ರಂತೆ ಆರಂಭಿಕರಾಗಿ ಕಣಕ್ಕಿಳಿಯುವ ಅವಕಾಶವೂ ಸಿಕ್ಕಿದೆ. ಅವರಂತೆ ಉತ್ತಮ ಆಟವಾಡಿ ನೆಲೆ ನಿಲ್ಲಲಿ ಅಂತ ಸಂಜಯ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here