ವಿಶ್ವ ಕ್ರಿಕೆಟಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸಖತ್ ಸದ್ದು ಮಾಡ್ತಿರೋ ಆಟಗಾರ. ಭರ್ಜರಿ ಫಾರ್ಮ್ನಲ್ಲಿರುವ ಅವರು ಒಡಿಐ ಮತ್ತು ಟಿ20 ಫಾರ್ಮೆಟಲ್ಲಿ ಟೀಮ್ ಇಂಡಿಯಾದ ಆಧಾರ ಸ್ತಂಭವಾಗಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ನೆರವಾಗಿದ್ದಾರೆ.
ಓಪನಿಂಗ್, ಒನ್ ಡೌನ್, ಟು ಡೌನ್, ತ್ರಿ ಡೌನ್, ಫೋರ್ತ್ ಡೌನ್ ಹೀಗೆ ಯಾವ್ದೇ ಕ್ರಮಾಂಕದಲ್ಲೂ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಬಲ್ಲೆ ಅನ್ನೋದನ್ನು ಪ್ರೂವ್ ಮಾಡಿರುವ ನಮ್ಮ ಕರಾವಳಿ ಕುವರ ರಾಹುಲ್ ಒಡಿಐ ಹಾಗೂ ಟಿ20 ಟೀಮಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಆದರೆ, ಈ ಮಟ್ಟಿಗೆ ಅದ್ಭುತ ಫಾರ್ಮಲ್ಲಿರುವ ಅವರಿಗೆ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಯಾಕಿಲ್ಲ ಅನ್ನೋದು ಸದ್ಯ ಕಾಡುತ್ತಿರುವ ಯಕ್ಷ ಪ್ರಶ್ನೆ.
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಮ್ಯಾಚನ್ನೇ ತೆಗೆದುಕೊಳ್ಳಿ, ಕ್ಯಾಪ್ಟನ್ ವಿರಾಟ್ ಕೊಹ್ಲಿ, ಟೆಸ್ಟ್ ಸ್ಪೆಷಲಿಸ್ಟ್ ಚೇತೃಶ್ವರ ಪೂಜಾರ ಕೂಡ ಮತ್ತೆ ಮತ್ತೆ ಎಡವಿದ್ದಾರೆ. ಯುವ ಆಟಗಾರರಾದ ಪೃಥ್ವಿ ಶಾ, ಹನುಮಾ ವಿಹಾರಿ ಕೂಡ ತಂಡಕ್ಕೆ ನೆರವಾಗುವಲ್ಲಿ ವಿಫಲರಾಗಿದ್ದಾರೆ. ತಕ್ಕಮಟ್ಟಿಗೆ ಕನ್ನಡಿಗ ಮಯಾಂಕ್ ಅಗರ್ ವಾಲ್, ಅಜಿಂಕ್ಯ ರಹಾನೆ ಪರವಾಗಿಲ್ಲ. ಆದರೆ, ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಅವರಿಬ್ಬರೂ ಸೋತಿದ್ದಾರೆ. ಎರಡನೇ ಇನ್ನಿಂಗ್ಸಲ್ಲಿ ರಹಾನೆ, ವಿಹಾರಿ ನಾಲ್ಕನೇ ದಿನಕ್ಕೆ ಆಟ ಮುಂದುವರೆಸಿದ್ದು, ಉತ್ತಮ ಜೊತೆಯಾಟ ಮೂಡಿ ಬರುತ್ತಾ ಅಂತ ಕಾದು ನೋಡಬೇಕು.
ಇನ್ನು ಮಹೇಂದ್ರ ಸಿಂಗ್ ಧೋನಿ ನಂತರ ಖಾಯಂ ವಿಕೆಟ್ ಕೀಪರ್ ಆಗಿ ತಂಡದಲ್ಲಿರುವ ರಿಷಭ್ ಪಂತ್ ಟೆಸ್ಟಲ್ಲೂ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗೆ ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಟೆಸ್ಟಲ್ಲಿ ಬ್ಯಾಟಿಂಗ್ ಬಲ ಕುಂದಿದೆ. ಹೀಗಾಗಿ ರಾಹುಲ್ಗೆ ಮಣೆ ಹಾಕಬೇಕಿದೆ. ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುವಲ್ಲಿ ನಿಸ್ಸೀಮರಾಗಿರುವ ಅವರು ಟೆಸ್ಟ್ನಲ್ಲೂ ಉತ್ತಮ ಆಟ ಮುಂದುವರೆಸುವ ವಿಶ್ವಾಸ ಕ್ರಿಕೆಟ್ ಪಂಡಿತರು, ಅಭಿಮಾನಿಗಳದ್ದು ಕೂಡ. ಆದ್ದರಿಂದ ಒಡಿಐ, ಟಿ20ಯ ಬ್ಯಾಟಿಂಗ್ ಶಕ್ತಿ ರಾಹುಲ್ ಅವರನ್ನು ಟೆಸ್ಟ್ ತಂಡಕ್ಕೂ ಕೂಡಿಸಿಕೊಂಡರೆ ಟಾಪ್ ಆರ್ಡರ್ ಅಥವಾ ಮಿಡಲ್ ಆರ್ಡರ್ಗೆ ತಂಡಕ್ಕೆ ಭದ್ರ ಗೋಡೆ ಸಿಕ್ಕಂತಾಗುತ್ತದೆ ಅನ್ನೋದ್ರಲ್ಲಿ ನೋ ಡೌಟ್.
ಇನ್ನು ಸಿಕ್ಕ ಒಂದೆರಡು ಅವಕಾಶಗಳಲ್ಲಿ ಮಿಂಚಿರುವ ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್ ಕಡೆಗಣನೆ ಕೂಡ ಬೇಸರದ ಸಂಗತಿ.
ಟೆಸ್ಟ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ಗೆ ಯಾಕಿಲ್ಲ ಅವಕಾಶ?
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on