ಮಂಗಳೂರು : ಟೀಮ್ ಇಂಡಿಯಾ ಕ್ರಿಕೆಟಿಗ ಕನ್ನಡಿಗ ಕೆ.ಎಲ್ ರಾಹುಲ್ ನಮ್ಮ ಮಂಗಳೂರಿನವ್ರು ಅನ್ನೋದು ಗೊತ್ತೇ ಇದೆ. ಸದ್ಯ ಅದ್ಭುತ ಫಾರ್ಮ್ನಲ್ಲಿರೋ ರಾಹುಲ್ ವಿಶ್ವಕ್ರಿಕೆಟ್ನ ಯುವ ಸ್ಟಾರ್ ಆಟಗಾರ. ಕನ್ನಡ ನಾಡು -ನುಡಿಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರೋ ಅವರು ಇದೀಗ ಮತ್ತೆ ತಮ್ಮ ಭಾಷಾ ಪ್ರೇಮ ಹಾಗೂ ಮಂಗಳೂರು ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.
ಮಂಗಳೂರಿನ ಹೃದಯಭಾಗದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು 150ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಫೆ.6 ರಂದು ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಹುಲ್ ಎಲ್ಲರನ್ನೂ ಆಹ್ವಾನಿಸಿದ್ದಾರೆ. ರಾಹುಲ್ ತುಳು ಮತ್ತು ಕನ್ನಡದಲ್ಲಿ ಆಹ್ವಾನಿಸಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಾಹುಲ್ ಕನ್ನಡ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನು ರಾಹುಲ್ ಅವರ ತಾಯಿ ರಾಜೇಶ್ವರಿ ಅವರು ಕಳೆದ ಎರಡು ದಶಕಗಳಿಂದ ವಿಶ್ವವಿದ್ಯಾಲಯ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ರಾಹುಲ್ ಬಾಲ್ಯ ಕಳೆದಿದ್ದು ಮಂಗಳೂರಲ್ಲೇ.
ವೈರಲ್ ವಿಡಿಯೋದಲ್ಲಿ ಏನಿದೆ? : ಕೆ.ಎಲ್ ರಾಹುಲ್ ವಿಡಿಯೋದ ಪ್ರಾರಂಭದಲ್ಲಿ ’ಪೂರೆರೆಗ್ ಲಾ ಎನ್ನ ನಮಸ್ಕಾರ. ಯಾನ್ ಕೆ.ಎಲ್ ರಾಹುಲ್ (ಎಲ್ಲರಿಗೂ ನನ್ನ ನಮಸ್ಕಾರ, ನಾನು ಕೆ.ಎಲ್ ರಾಹುಲ್ ) ಎಂದು ತುಳುವಿನಲ್ಲಿ ಮಾತಾರಂಭಿಸಿದ್ದಾರೆ. ಬಳಿಕ ಮಂಗಳೂರು ವಿ.ವಿ ಕಾಲೇಜಿನ 150ನೇ ವರ್ಷದ ಸಂಭ್ರಮಾಚರಣೆಯು ಫೆ.6 ರಂದು ನಡೆಯಲಿದ್ದು, ನೀವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿ ಎಂದು ಕನ್ನಡದಲ್ಲಿ ಆಹ್ವಾನಿಸಿದ್ದಾರೆ.
Posted by Principalucm150thyear on Tuesday, January 21, 2020
zithromax z-pak 250 mg oral tablet
zithromax chlymidia