ನವದೆಹಲಿ: ಕ್ರಿಕೆಟ್ ಮೂಲಕ ಎಲ್ಲರ ಮನ ಗೆದ್ದಿರುವ ಕೆ.ಎಲ್ ರಾಹುಲ್ ತಮ್ಮ 28 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಬಡ ಮಕ್ಕಳಿಗಾಗಿ 2019 ವಿಶ್ವಕಪ್ ಕ್ರಿಕೆಟ್ನಲ್ಲಿ ತಾನು ಉಪಯೋಗಿಸಿದ್ದ ವಸ್ತುಗಳನ್ನು ಹರಾಜಿಗಿಟ್ಟಿದ್ದರು. ಹರಾಜಿನಲ್ಲಿ ಮಾರಾಟವಾದ ವಸ್ತುಗಳಿಂದ ಈಗ 8 ಲಕ್ಷ ಸಂಗ್ರಹವಾಗಿದೆ.
ಕೆ.ಎಲ್ ರಾಹುಲ್ ಕ್ರಿಕೆಟ್ನಲ್ಲಿ ಉಪಯೋಗಿಸಿದ್ದ ಬ್ಯಾಟ್ಗೆ ಹರಾಜಿನಲ್ಲಿ 2,64,228 ರೂ ಸಿಕ್ಕಿದೆ. ಇನ್ನುಳಿದಂತೆ ಹೆಲ್ಮೆಟ್ಗೆ 1,22,677 ರೂ, ಕಾಲಿನ ರಕ್ಷಣೆಗೆ ಧರಿಸುವ ಪ್ಯಾಡ್ 33,028 ರೂ, ಏಕದಿನ ಜೆರ್ಸಿ 1,13,240 ರೂ, ಟಿ20 ಜೆರ್ಸಿ 1,04,824 ರೂ, ಟೆಸ್ಟ್ ಜೆರ್ಸಿ 1,32,774 ರೂ ಹಾಗೂ ಕೈ ಗ್ಲೌಸ್ 28,782 ರೂ ದೊರೆತಿದೆ. ಈ ಮೂಲಕ ಒಟ್ಟು 8 ಲಕ್ಷ ರೂಪಾಯಿ ಗಳಷ್ಟು ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ಬಡ ಮಕ್ಕಳ ಭವಿಷ್ಯಕ್ಕಾಗಿ ನೀಡುತ್ತಿದ್ದಾರೆ.