Home ಸಿನಿ ಪವರ್ ಕೆ.ಎಲ್ ರಾಹುಲ್- ಅಭಿಷೇಕ್ ಅಂಬರೀಶ್ ಸ್ನೇಹ ಅದೆಂಥಾದ್ದು ಗೊತ್ತಾ?

ಕೆ.ಎಲ್ ರಾಹುಲ್- ಅಭಿಷೇಕ್ ಅಂಬರೀಶ್ ಸ್ನೇಹ ಅದೆಂಥಾದ್ದು ಗೊತ್ತಾ?

ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಸ್ಯಾಂಡಲ್​ ವುಡ್ ನಟ ಅಭಿಷೇಕ್ ಅಂಬರೀಶ್ ಗೆಳೆಯರು ಅನ್ನೋ ವಿಷ್ಯ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಅಭಿ ಮತ್ತು ರಾಹುಲ್ ಸ್ನೇಹ ಎಂಥಾದ್ದು ಗೊತ್ತಾ?
ಕೆ.ಎಲ್ ರಾಹುಲ್ ಅವರು ಇಂಗ್ಲೆಂಡ್​ ನಲ್ಲಿ ಇದ್ದಾರೆ. ವರ್ಲ್ಡ್​​​​ಕಪ್​ ಆಡಲು ಇಂಗ್ಲೆಂಡ್​ ಗೆ ತೆರಳಿರೋ ವಿರಾಟ್​ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್​ಮನ್​ಗಳಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಒಬ್ರು. ಬಾಂಗ್ಲಾ ದೇಶ ವಿರುದ್ಧದ ನಡುವಿನ ಪ್ರಾಕ್ಟಿಸ್​ ಮ್ಯಾಚ್​ನಲ್ಲಿ ಶತಕ ಸಿಡಿಸಿ ಮಿಂಚಿಂದ್ರು. ವಿಶ್ವಕಪ್​ನಲ್ಲಿ ವಿರಾಟ್​ ಪಡೆಯ ಪ್ಲೇಯಿಂಗ್​ 11ನಲ್ಲಿ ರಾಹುಲ್ ಆಡುವುದು ಬಹುತೇಕ ಕನ್ಫರ್ಮ್.
ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ‘ಅಮರ್’ ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ಅಭಿ ಸಿನಿ ಜರ್ನಿ ಶುರು ಮಾಡ್ತಾ ಇದ್ದಾರೆ.
ವರ್ಲ್ಡ್​ಕಪ್ ಅಭ್ಯಾಸದಲ್ಲಿ ಬ್ಯುಸಿ ಇರುವ ರಾಹುಲ್ ತನ್ನ ಗೆಳೆಯನ ಫಸ್ಟ್ ಮೂವಿ ರಿಲೀಸ್ ಆಗ್ತಾ ಇದೆ ಅನ್ನೋದನ್ನು ಮರೆತಿಲ್ಲ. ಅಭಿಯ ಮೊದಲ ಚಿತ್ರ ಅಮರ್​​ ಗೆ ರಾಹುಲ್ ವಿಶ್ ಮಾಡಿದ್ದಾರೆ. ಈ ಬಗ್ಗೆ ಪವರ್ ಟಿವಿ ಜೊತೆ ಮಾತನಾಡಿದ ಅಭಿಷೇಕ್ ಅಂಬರೀಶ್​, ರಾಹುಲ್ ನಂಗೆ ಒಳ್ಳೆಯ ಸ್ನೇಹಿತ, ವರ್ಲ್ಡ್​​ಕಪ್ ಆಡೋಕೆ ಇಂಗ್ಲೆಂಡ್​​ಗೆ ಹೋಗಿದ್ದಾನೆ. ವಿಶ್ ಮಾಡ್ದ.. ಖುಷಿಯಾಯ್ತು.ಅವ್ನು ಚೆನ್ನಾಗಿ ಆಡ್ತಾ ಇದ್ದಾನೆ. ಚೆನ್ನಾಗಿ ಆಡಿ ವಿಶ್ವಕಪ್​ ಗಿಫ್ಟ್ ತಗೊಂಡು ಬರಲಿ ಅಂತ ಹೇಳಿದ್ರು.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments