ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​.ಎ ಬೋಬ್ಡೆ ಪದಗ್ರಹಣ

0
484

ನವದೆಹಲಿ : ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೋಬ್ಡೆ ( ಎಸ್. ಎ ಬೋಬ್ಡೆ) ಇಂದು ಪ್ರಮಾಣವಚನ ಸ್ವೀಕರಿಸಿದರು. 47ನೇ ಸಿಜೆಐಯಾಗಿ ಅಧಿಕಾರ ಸ್ವೀಕರಿಸಿದ ಬೋಬ್ಡೆಯವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣವಚನ ಬೋಧಿಸಿದರು.
ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೂಯ್ ಭಾನುವಾರ (ನವೆಂಬರ್ 17) ನಿವೃತ್ತರಾಗಿದ್ದು, ತೆರವಾದ ಸ್ಥಾನವನ್ನು ಬೋಬ್ಡೆ ತುಂಬಿದ್ದಾರೆ. ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟಿನ ಪಂಚಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ಬೋಬ್ಡೆ ಕೂಡ ಒಬ್ಬರಾಗಿದ್ದರು. ಇವರು ಮಹಾರಾಷ್ಟ್ರ ಮೂಲದವರಾಗಿದ್ದು, ಹೆಸರಾಂತ ಹಿರಿಯ ವಕೀಲ ಅರವಿಂದ್ ಶ್ರೀನಿವಾಸ್​ ಬೋಬ್ಡೆಯವರ ಪುತ್ರ.
ಮಹಾರಾಷ್ಟ್ರದ ನಾಗಪುರದಲ್ಲಿ 1956 ಏಪ್ರಿಲ್ 24ರಂದು ಜನಿಸಿದ ಎಸ್. ಎ ಬೋಬ್ಡೆ, ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿ, ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ, ಮಹಾರಾಷ್ಟ್ರ ನ್ಯಾಷನಲ್‌ ಲಾ ಯೂನಿವರ್ಸಿಟಿ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಸಿದ್ದು, 2021ರ ಏಪ್ರಿಲ್ 23ರಂದು ನಿವೃತ್ತಿ ಹೊಂದಲಿದ್ದಾರೆ.
ಇನ್ನು ನಿನ್ನೆಯಷ್ಟೇ ನಿವೃತ್ತರಾದ ನ್ಯಾ. ರಂಜನ್ ಗೊಗೂಯ್, ಅಸ್ಸಾಂನ ದಿಬ್ರುಗಢದಲ್ಲಿ 1954 ನವೆಂಬರ್ 18ರಂದು ಜನಿಸಿದರು. 1978ರಲ್ಲಿ ಗುವಾಹತಿ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ ಇವರು, 2001ರಲ್ಲಿ ಗುವಾಹತಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ, ಬಳಿಕ ಫೆಬ್ರವರಿ 28, 2001 ಖಾಯಂ ನ್ಯಾಯಮೂರ್ತಿಯಾಗಿ ನೇಮಕವಾದರು. 2010 ಸೆಫ್ಟೆಂಬರ್ 9ರಂದು ಪಂಜಾಬ್‌-ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡು ನಂತರ ಫೆಬ್ರವರಿ 12ರಂದು 2011ರಂದು ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿ ನೇಮಿಸಲ್ಪಟ್ಟರು. ಏಪ್ರಿಲ್‌ 2, 2012ರಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ವರ್ಗಗೊಂಡಿದ್ದ ಇವರು, 2018 ಅಕ್ಟೋಬರ್‌ 3ರಿಂದ ನವೆಂಬರ್​ 17ರವರೆಗೆ ಸೇವೆ ಸಲ್ಲಿಸಿದ್ದಾರೆ. ಈಶಾನ್ಯ ರಾಜ್ಯಗಳಿಂದ ನೇಮಕವಾದ ಮೊದಲ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಇವರದ್ದಾಗಿದೆ. ಅಯೋಧ್ಯೆ ಮಹಾತೀರ್ಪು ಸೇರಿದಂತೆ ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ.

ಶತಮಾನದ ತೀರ್ಪು ನೀಡಿದ ಸುಪ್ರೀಂ ನ್ಯಾಯಮೂರ್ತಿಗಳು ಇವರೇ…

LEAVE A REPLY

Please enter your comment!
Please enter your name here