‘ಜುಗಾರಿ ಕ್ರಾಸ್​’ ನಿಂದ ಹಿಂದೆ ಸರಿದಿದ್ದೇಕೆ ಡೈರೆಕ್ಟರ್ ನಾಗಾಭರಣ?

0
373

ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್​’ ಸಿನಿಮಾ ಆಗಲಿದೆ ಅನ್ನೋ ಸುದ್ದಿ ಬಹುಶಃ ನೀವೆಲ್ಲಾ ಓದಿರ್ತೀರಿ, ಕೇಳಿರ್ತೀರಿ. ಚಿರಂಜೀವಿ ಸರ್ಜಾ ಅಭಿನಯದ ಈ ಸಿನಿಮಾಗೆ ಫೆಬ್ರವರಿ 10ರಂದು ಸರಳ ಪೂಜೆ ಕೂಡ ನೆರವೇರಿತ್ತು. ಆದ್ರೆ ಈಗ ಇದಕ್ಕಿದ್ದಂತೆ ಹೊಸ ಟ್ವಿಸ್ಟ್ ಸಿಕ್ಕಿದ್ದು ನಿರ್ದೇಶಕ ನಾಗಾಭರಣ ಸಿನಿಮಾದಿಂದ ಹಿಂದೆ ಸರಿದಿದ್ದಾರೆ.
ಕಡ್ಡಿಪುಡಿ ಚಂದ್ರು ನಿರ್ಮಾಣದ ಈ ಚಿತ್ರವನ್ನು ನಾಗಾಭರಣ ನಿರ್ದೇಶಿಸಬೇಕಿತ್ತು. ಅದರಂತೆ ಟೀಮ್ ಕೂಡ ರೆಡಿಯಾಗಿತ್ತು. ಚಿರು ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಈಗ ನಾಗಾಭರಣ ತಾನು ‘ಜುಗಾರಿ ಕ್ರಾಸ್​’ಗೆ ಆ್ಯಕ್ಷನ್​​ಕಟ್ ಹೇಳಲ್ಲ ಅಂದಿದ್ದಾರೆ. ಚಂದ್ರು ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ.
ನಾಗಾಭರಣರವೇ ಈ ಸಿನಿಮಾ ನಿರ್ದೇಶಿಸ್ಬೇಕೆಂಬುದು ನನ್ನ ಬಯಕೆಯಾಗಿತ್ತು. ಆದ್ರೆ, ಅವರು ಹೇಳಿರುವ ಬಜೆಟ್​ ಒದಗಿಸುವುದಕ್ಕೆ ಆಗಲ್ಲ. ಈ ಬಗ್ಗೆ ನಾಗಾಭರಣ ಮತ್ತು ಅವರ ಪುತ್ರ ಪನ್ನಗಾಭರಣ ಜೊತೆ ಚರ್ಚಿಸಿದ್ದೇನೆ. ತೇಜಸ್ವಿಯವರ ‘ಜುಗಾರಿ ಕ್ರಾಸ್​’ ಪುಸ್ತಕದ ಹಕ್ಕನ್ನು ಖರೀದಿಸಿದ್ದೇನೆ ಬೇರೊಬ್ಬ ನಿರ್ದೇಶಕರಿಂದ ಸಿನಿಮಾ ಮಾಡಿಸ್ತೀನಿ ಅಂದಿದ್ದಾರೆ.

LEAVE A REPLY

Please enter your comment!
Please enter your name here