HomeP.Specialವಿಜ್ಞಾನ-ತಂತ್ರಜ್ಞಾನಅತ್ಯಾಧುನಿಕ ಐಎನ್‌ಎಸ್‌ ವಿಶಾಖಪಟ್ಟಣಂ ಸೇನೆಗೆ ಸೇರ್ಪಡೆ

ಅತ್ಯಾಧುನಿಕ ಐಎನ್‌ಎಸ್‌ ವಿಶಾಖಪಟ್ಟಣಂ ಸೇನೆಗೆ ಸೇರ್ಪಡೆ

ಬೆಂಗಳೂರು : ಕ್ಷಿಪಣಿಗಳನ್ನು  ಉಡ್ಡಯನ ಮಾಡಬಲ್ಲ ಹಾಗೂ ಧ್ವಂಸ ಮಾಡಬಲ್ಲ ಸಾಮರ್ಥ್ಯ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಯುದ್ಧ ಕೌಶಲ್ಯಗಳನ್ನು ಒಳಗೊಂಡಿರುವ ಅತ್ಯಾಧುನಿಕ ದಾಳಿ ಯುದ್ಧ ನೌಕೆಯಾದ ಐಎನ್‌ಎಸ್‌ ವಿಶಾಖಪಟ್ಟಣಂ,  ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.

ಇದು ನೀರಿನ ಮೇಲೆ ಮತ್ತು ನೀರಿನೊಳಗೆ ಎದುರಾಳಿಗಳ ಅಸ್ತ್ರಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಭಾರತೀಯ ನೌಕಾಪಡೆಯ ಆರು ಜಲಾಂತರಗಾಮಿ (ಸಬ್ಮೆರೀನ್) ಸ್ಕಾರ್ಪೀನ್ ನೌಕೆಗಳ ಪೈಕಿ ವೆಲಾ ಜೊತೆ  ಐ ಎನ್ ಎಸ್ ವಿಶಾಖಪಟ್ನಂ ನೌಕೆಯು ಸೇರಿದೆ. ಇದು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ. ಮೇಕ್ ಇನ್ ಇಂಡಿಯಾ ದ್ಯೇಯಕ್ಕೆ ಐ ಎನ್ ಎಸ್ ವಿಶಾಖಪಟ್ಟಣಂ ನೌಕೆಗಳು ಉಜ್ವಲ ಮತ್ತು ಹೆಮ್ಮೆಯ ಮಾದರಿಯಾಗಿ ನಿಲ್ಲುತ್ತವೆ.

INS ವಿಶಾಖಪಟ್ಟಣಂ 163 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ. ಇದರ ತೂಕ 7,400 ಟನ್ ಆಗಿದೆ. ಈ ಯುದ್ಧನೌಕೆ ಅತ್ಯಂತ ಆಧುನಿಕವಾಗಿದೆ. ಇದು ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ವಿಧ್ವಂಸಕ ಯುದ್ಧನೌಕೆಯಾಗಿದ್ದು, ಇದರಲ್ಲಿ 50 ಅಧಿಕಾರಿಗಳು ಸೇರಿದಂತೆ ಸುಮಾರು 300 ಸೈನಿಕರನ್ನು  ನಿಯೋಜಿಸಬಹುದಾಗಿದೆ.

ನಾಲ್ಕು ವಿಶಾಖಪಟ್ಟಣಂ ವರ್ಗದ ವಿಧ್ವಂಸಕಗಳನ್ನು ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆ, ನೌಕಾ ವಿನ್ಯಾಸ ನಿರ್ದೇಶನಾಲಯವು ಸ್ಥಳೀಯವಾಗಿ ವಿನ್ಯಾಸಗೊಳಿಸಿದ್ದರೆ ಅವುಗಳ ನಿರ್ಮಾಣ ಕಾರ್ಯ ಮುಂಬೈನ ಮಜಗಾನ್ ಡಾಕ್ ಲಿಮಿಟೆಡ್‌ನಿಂದ ಆಗಿದೆ.

ಪ್ರತಿಯೊಂದು ಐ ಎನ್ ಎಸ್ ವಿಶಾಖಪಟ್ಟಣಂ ನೌಕೆಯ ಎತ್ತರ 163 ಮೀಟರ್ ಮತ್ತು ಅಗಲ 17 ಮೀಟರ್ ಆಗಿದೆ. ನೀರಿನಲ್ಲಿ ಸರಿದಾಡುವಾಗ ಇದರ ತೂಕ 7,400 ಟನ್ ಆಗಿರುತ್ತದೆ.

ಐ ಎನ್ ಎಸ್ ವಿಶಾಖಪಟ್ನಂ ಭಾರತದಲ್ಲಿ ನಿರ್ಮಿತವಾಗಿರುವ ಅತ್ಯಂತ ಸದೃಢ ಮತ್ತು ಬಲಶಾಲಿ ಯದ್ಧನೌಕೆಯಾಗಿದೆ. ನಾಲ್ಕು ಶಕ್ತಿಶಾಲಿ ಗ್ಯಾಸ್ ಟರ್ಬೈನ್ ಗಳ ಮೂಲಕ ಇದು ಚಲಿಸುತ್ತದೆ ಮತ್ತು 30 ನಾಟ್ಸ್ ಕ್ಕಿಂತ ಹೆಚ್ಚಿನ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments