ವಾಷಿಂಗ್ಟನ್ : ಜೋ ಬಿಡನ್ ಅಮೆರಿಕ ಅಧ್ಯಕ್ಷರಾದ್ರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಕೊಡಿಸಲು ನೆರವು ನೀಡ್ತಾರೆ ಅಂತ ಭಾರತದ ಅಮೆರಿಕ ಮಾಜಿ ರಾಯಭಾರಿ ರಿಚರ್ಡ್ ವರ್ಮಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ನಲ್ಲಿ ನಡೆಯಲಿರೋ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡನ್ ಗೆದ್ರೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯ ನೀಡೋ ವಿಚಾರದಲ್ಲಿ ಖಂಡಿತಾ ಸಾಥ್ ಕೊಡ್ತಾರೆ. ಅದ್ರಲ್ಲಿ ಯಾವ್ದೇ ರೀತಿಯ ಅನುಮಾನವಿಲ್ಲ. ವಿಶ್ವಮಟ್ಟದ ಸಂಘಟನೆಯನ್ನು ಪುನರ್ ರೂಪಿಸಲು ಶ್ರಮಿಸ್ತಾರೆ. ನಮ್ಮ ನಾಗರಿಕರನ್ನು ಸುರಕ್ಷತೆಗಾಗಿ ಭಾರತದೊಡನೆ ಕೈ ಜೋಡಿಸೋ ಕೆಲಸ ಮಾಡ್ತಾರೆ. ಭಯೋತ್ಪಾದನೆ, ಗಡಿ ಯಥಾಸ್ಥಿತಿ ಕದಡುವ ಭಾರತದ ನೆರೆರಾಷ್ಟ್ರಗಳ ಪ್ರಯತ್ನವನ್ನು ತಡೆಯಲು ಸಹಾಯ ಮಾಡ್ತಾರೆ ಅಂದಿದ್ದಾರೆ.
ಪ್ರಸ್ತುತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ15 ರಾಷ್ಟ್ರಗಳಿವೆ. ಅವುಗಳಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್ , ರಷ್ಯಾ ಮತ್ತು ಚೀನಾ ಶಾಶ್ವತ ಸದಸ್ಯತ್ವವನ್ನು ಹೊಂದಿವೆ. ಭಾರತಕ್ಕೆ ಶಾಶ್ವತ ಸ್ಥಾನ ನೀಡ್ಬೇಕು ಅಂತ ಎಲ್ಲಾ ದೇಶಗಳು ಬೆಂಬಲ ನೀಡ್ತಿದ್ರೂ ಚೀನಾ ವಿರೋಧಿಸ್ತಲೇ ಇದೆ.
ರಿಚರ್ಡ್ ವರ್ಮಾ 2014 – 2017ರ ಅವಧಿಯಲ್ಲಿಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.