Home ಸಿನಿ ಪವರ್ 'ಜೋಡೆತ್ತು'ಗೆ ಫಿಲ್ಮ್ ಚೇಂಬರ್ ಅಸ್ತು..! ಯಾರಾಗ್ತಾರೆ ಹೀರೊ?

‘ಜೋಡೆತ್ತು’ಗೆ ಫಿಲ್ಮ್ ಚೇಂಬರ್ ಅಸ್ತು..! ಯಾರಾಗ್ತಾರೆ ಹೀರೊ?

ಮಂಡ್ಯ ಲೋಕಸಭಾ ಅಖಾಡದಲ್ಲಿ ಸಖತ್ ಸೌಂಡು ಮಾಡಿದ್ದು ಆ ಎರಡು ಪದಗಳು.. ಒಂದು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಅನ್ನೋದು.. ಇನ್ನೊಂದು ‘ಜೋಡೆತ್ತು’ ಅನ್ನೋದು. ಈ ಎರಡು ಟೈಟಲ್​ ನಲ್ಲಿ ಸಿನಿಮಾ ಮಾಡೋ ಚರ್ಚೆ ಕೂಡ ಹಳೇದೆ. ಆದ್ರೆ, ಫಿಲ್ಮ್ ಚೇಂಬರ್​ನಲ್ಲಿ ಟೈಟಲ್ ಇನ್ನೂ ರಿಜಿಸ್ಟರ್ ಆಗಿರ್ಲಿಲ್ಲ. ಇದೀಗ ‘ಎಲ್ಲಿದ್ದೀಯಪ್ಪಾ’ ಮತ್ತು ‘ಜೋಡೆತ್ತು’ ಟೈಟಲ್​ಗಳು ಫಿಲ್ಮ್​ ಚೇಂಬರ್​ನಲ್ಲಿ ರಿಜಿಸ್ಟರ್ ಆಗಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಶುರುಮಾಡಿದಾಗ, ದರ್ಶನ್ ‘ ನಾವಿಬ್ರು ಜೋಡೆತ್ತುಗಳು’ ಅಂದಿದ್ರು. ಬಳಿಕ ಸಿಎಂ ಕುಮಾರಸ್ವಾಮಿ ‘ನಾನು ಮತ್ತು ಡಿ.ಕೆ ಶಿವಕುಮಾರ್ ಅವರು ನಿಜವಾದ ‘ಜೋಡೆತ್ತುಗಳು’ ಅಂದಿದ್ರು. ಹೀಗೆ ಜೋಡೆತ್ತು ಮಂಡ್ಯ ಲೋಕ ಕಣದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡಿತ್ತು. ಈ ಹೆಸ್ರಲ್ಲೇ ಸಿನಿಮಾ ಮಾಡೋ ಚರ್ಚೆಯೂ ಆಗಿತ್ತು.
‘ಜೋಡೆತ್ತು’ ಸಿನಿಮಾದ ಫಸ್ಟ್ ಸ್ಟೆಪ್ ಅನ್ನುವಂತೆ ಇದೀಗ ಫಿಲ್ಮ್​​ ಚೇಂಬರ್​ನಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ಜೋಡೆತ್ತು ಅನ್ನೋ ಟೈಟಲ್​ ಕೋರಿ ಅರ್ಜಿ ಸಲ್ಲಿಸಿದ್ದ ಚಿತ್ರತಂಡಕ್ಕೆ ಪರವಾನಗಿ ಸಿಕ್ಕಿದೆ. ಮೇ.3ರಂದು ಸಲ್ಲಿಸಿದ್ದ ಅರ್ಜಿ ಪರಿಶೀಲನೆ ನಡೆಸಿದ ಫಿಲ್ಮ್​ ಚೇಂಬರ್ ಟೈಟಲ್​ ಗೆ ಅಸ್ತು ಅಂದಿದೆ.
ದರ್ಶನ್ ಅವರಿಗಾಗಿ ಸಿನಿಮಾ ಮಾಡೋ ಪ್ಲಾನ್ ಚಿತ್ರತಂಡದ್ದಾಗಿದೆ. ದರ್ಶನ್ ಗಾಗಿ ಕಥೆ ಮಾಡ್ತಿದ್ದೇವೆ ಅಂತ ಪ್ರೊಡ್ಯೂಸರ್ ಎಂ.ಜಿ ರಾಮಮೂರ್ತಿ ಹೇಳಿದ್ದಾರೆ. ಆದ್ರೆ, ಇನ್ನೂ ದರ್ಶನ್ ಅವರಿಂದ ಒಪ್ಪಿಗೆ ಸಿಕ್ಕಿಲ್ಲ.
ಒಟ್ಟಿನಲ್ಲಿ ಜೋಡೆತ್ತು ಸಿನಿಮಾ ಆಗೋದು ಪಕ್ಕಾ ಆಗಿದೆ. ನಾಯಕ-ನಾಯಕಿ ಯಾರು ಅನ್ನೋದನ್ನು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments