Friday, October 7, 2022
Powertv Logo
Homeದೇಶಜೆಎನ್​ಯು ಘರ್ಷಣೆಗೆ ಮೋದಿ, ಅಮಿತ್ ಶಾ ಗೂಂಡಾಗಳು ಕಾರಣ : ಪ್ರಿಯಾಂಕಾ ಕಿಡಿ

ಜೆಎನ್​ಯು ಘರ್ಷಣೆಗೆ ಮೋದಿ, ಅಮಿತ್ ಶಾ ಗೂಂಡಾಗಳು ಕಾರಣ : ಪ್ರಿಯಾಂಕಾ ಕಿಡಿ

ನವದೆಹಲಿ: ಜೆಎನ್​ಯುನಲ್ಲಿ ಕಳೆದ ರಾತ್ರಿ ನಡೆದ ಘರ್ಷಣೆಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಗೂಂಡಾಗಳು ಕಾರಣ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ. 

ವಿವಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಎಡಪಂಥೀಯ ವಿದ್ಯಾರ್ಥಿ ಮುಖಂಡರು ಹಾಗೂ ಬೋಧಕ ವರ್ಗವನ್ನು ಗುರಿ ಮಾಡಿಕೊಂಡೆ  ದಾಳಿ ನಡೆಸಲಾಗಿದೆ. ಮಹಿಳೆಯರು ಸೇರಿದಂತೆ ಹಲವರು ಯುವಕರ ಗುಂಪು ಮುಸುಕುಧಾರಿಗಳಾಗಿ ಬಂದು ವಿವಿ ಕ್ಯಾಂಪಸ್​ನೊಳಗೆ ನುಗ್ಗಿ  ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಕ್ಯಾಂಪಸ್​ನ ಆಸ್ತಿ-ಪಾಸ್ತಿಗಳಿಗೂ ಹಾನಿಯುಂಟು ಮಾಡಿದ್ದಾರೆ. 

ಪ್ರಿಯಾಂಕಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಮೋದಿ ಹಾಗೂ ಅಮಿತ್ ಶಾ ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. 

ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಿಇಂದು ಮುಂಜಾನೆ ಪ್ರಿಯಾಂಕಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ  ಆರೋಗ್ಯ ವಿಚಾರಿಸಿದ್ದಾರೆ.

- Advertisment -

Most Popular

Recent Comments