ಶ್ರೀನಗರ: ದೇಶಾದ್ಯಂತ ಕೊರೋನಾ ವೈರಸ್ ತಡೆಯಲು ಲಾಕ್ಡೌನ್ ಆದೇಶವನ್ನು ಹೊರಡಿಸಿದ್ದರೆ, ಇತ್ತ ಜಮ್ಮು ಮತ್ತು ಕಾಶ್ಮೀರಾದಲ್ಲಿ ಉಗ್ರರ ಅಟ್ಟಹಾಸ ಮಾತ್ರ ಇನ್ನು ಕೊನೆಗೊಂಡಿಲ್ಲ. ದೇಶದೊಳಗೆ ಹೇಗೆ ನುಸುಳುವುದೆಂದು ಬಕ ಪಕ್ಷಗಳಂತೆ ಕಾಯುತ್ತಲೇ ಇರುತ್ತಾರೆ. ಕಾಶ್ಮೀರ ಕಣಿವೆಯಲ್ಲಿ ಕಳೆದ 24 ಗಂಟೆಗಳಲ್ಲಿ ಗಡಿ ನುಸುಳಿ ಒಳ ಬರಲು ಪ್ರಯತ್ನಿಸಿದ್ದ 9 ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ.
ಗಡಿ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಈವರು ಉಗ್ರರನ್ನು ಸೇನಾ ಪಡೆ ಹೊಡೆದುರುಳಿಸಿದ್ದು, ಗುಪ್ತಚರ ಇಲಾಖೆಯಿಂದ ಪಕ್ಕಾ ಮಾಹಿತಿ ಪಡೆದು ಭಾರತೀಯ ಸೇನೆ ಈ ಕಾರ್ಯಾಚರಣೆಯನ್ನು ನಡೆಸಿದೆ.
ಶನಿವಾರ ಬಾಟ್ಪುರಾ ಪ್ರದೇಶದಲ್ಲಿ ಸೇನಾಪಡೆಯ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಹತರಾದ ಉಗ್ರರು ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದವರಾಗಿದ್ದು, ಅವರು ಬಳಸಿದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಇನ್ನು ಉಗ್ರರು ಮತ್ತು ಸೇನಾ ಪಡೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಯೋಧ ಹುತಾತ್ಮನಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.
2dictator