ಬೆಂಗಳೂರು: ಕಳೆದ ಹತ್ತು ತಿಂಗಳಿನಿಂದ ರಾಜ್ಯದಲ್ಲಿ ಕಿಲ್ಲರ್ ಕೊರೋನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಕಳೆದ ಕೆಲವು ದಿನಗಳಿಂದ ಕೊರೋನಾ ಅಟ್ಟಹಾಸ ಕಡಿಮೆ ಆಗಿದೆ ಅನ್ನುವಷ್ಟರಲ್ಲಿ, ರೂಪಾಂತರಗೊಂಡಿರುವ ವೈರಸ್ ಭೀತಿ ಹೆಚ್ಚಾಗಿದೆ.
ಜೆಪಿ ನಗರದಲ್ಲಿ ಮೊನ್ನೆ ಲಂಡನ್ ನಿಂದ ಬಂದು ಇಳಿದಿದ್ದಾರೆ. ಲಂಡನ್ ನಿಂದ ಬಂದ ಬಂದಿದ್ದಾರೆ ಎಂದು ಅಕ್ಕ ಪಕ್ಕದ ಜನರು ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ಆದರೆ ಮಗುವಿನ ತಂದೆಗೆ ಬ್ರಿಟನ್ ವೈರಸ್ ಕಾಣಿಸಿಕೊಂಡಿದೆ ಎಂದು ಗೊತ್ತಾದ ಕೂಡಲೇ ಅಲ್ಲಿನ ಜನರು ಬೆಚ್ಚಿ ಬಿದಿದ್ದಾರೆ. ಜೆಪಿ ನಗರದ ಜನರಲ್ಲಿ ಆತಂಕ ಮನೆ ಮಾಡಿದೆ.
ರಾಜ್ಯದಲ್ಲಿ ಬ್ರಿಟನ್ ವೈರಸ್ ತಾಂಡವವಾಡುತ್ತಿದೆ. ಈಗಾಗಲೇ ಹಲವರಲ್ಲಿ ವೈರಸ್ ದೃಢವಾಗಿದ್ದು, ಸಿಲಿಕಾನ್ ಸಿಟಿ ಜನರು ಬೆಚ್ಚಿಬಿದ್ದಿದ್ದಾರೆ. ಈ ನಡುವೆ ಜೆಪಿನಗರದಿಂದ ಬಂದ ಫ್ಯಾಮಿಲಿಯಲ್ಲಿ ಬ್ರಿಟನ್ ವೈರಸ್ ಕಾಣಿಸಿಕೊಂಡಿದೆ. ಅಷ್ಟೇ ಆಗಿದ್ರೆ ಪರವಾಗಿಲ್ಲ. ದೂರದ ಲಂಡನ್ನಿಂದ ಮಗು ಊರಿಗೆ ಬಂದಿದೆ ಅಂತ ಅಕ್ಕಪಕ್ಕದ ಮಕ್ಕಳೆಲ್ಲ ಸೇರಿ ಆ ಮಗುವಿನ ಜೊತೆ ಆಟವಾಡಿದ್ದಾರೆ. ಹಾಗೇ ಅಕ್ಕಪಕ್ಕದವರೂ ಕೂಡ ಮುದ್ದಾಡಿದ್ದರು. ಮನೆಯ ಕೆಲಸದವರು ಸಹ ಮಗುವನ್ನ ಹೊರಗೆ ತಂದು ಆಟವಾಡಿದ್ದಾರೆ. ಆದರೆ ಈಗ ಮಗುವಿನ ತಂದೆಗೆ ವೈರಸ್ ಇರೋದು ಪತ್ತೆಯಾಗಿದೆ. ಹೀಗಾಗಿ ನೆರೆ-ಹೊರೆಯವರಿಗೆಲ್ಲ ಆತಂಕ ಶುರುವಾಗಿದೆ.
ಕೊನೆಗೂ ಎಚ್ಚೆತ್ತು ಮನೆ ಸೀಲ್ಡೌನ್ ಮಾಡಿದ ಬಿಬಿಎಂಪಿ ! ನಿನ್ನೆ ಬ್ರಿಟನ್ ವೈರಸ್ ಜೆಪಿನಗರದ ವ್ಯಕ್ತಿಯಲ್ಲಿ ಕಾಣಿಸಿಕೊಂಡರೂ ಆ ಮನೆಯನ್ನ ಸೀಲ್ಡೌನ್ ಮಾಡಿರಲಿಲ್ಲ. ಅಲ್ಲದೇ ಮನೆ ಮುಂದಿನ ರಸ್ತೆಯನ್ನೂ ಕೂಡ ಬಂದ್ ಮಾಡಿರಲಿಲ್ಲ. ಹೀಗಾಗಿ ಮನೆ ಮುಂದೆ ಓಡಾಟ ಎಂದಿನಂತಿತ್ತು. ಹಾಗೇ ಮನೆಯನ್ನ ಸೀಲ್ಡೌನ್ ಮಾಡದ ಬಿಬಿಎಂಪಿ ಕ್ರಮದ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಕುರಿತು ಪವರ್ ಟಿವಿ ವರದಿ ಮಾಡಿತ್ತು. ಕೊನೆಗೆ ಎಚ್ಚೆತ್ತುಕೊಂಡ ಬಿಬಿಎಂಪಿ, ಜೆಪಿನಗರದ ಸೋಂಕಿತನ ಮನೆಯನ್ನ ಸೀಲ್ಡೌನ್ ಮಾಡಿದೆ. ಹಾಗೇ ಮನೆಗೆ ಕ್ವಾರಂಟೀನ್ ಪೋಸ್ಟರ್ ಅಂಟಿಸಿದೆ.
ಸದ್ಯ ಜೆಪಿನಗರದ ಸೋಂಕಿತನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಆತನಿಗೆ ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಆದರೆ ಜನರು ಮಾತ್ರ ಭಯಗೊಂಡಿದ್ದಾರೆ. ಇತ್ತ ಸರ್ಕಾರ ಕೂಡ ಹೆಚ್ಚಿನ ನಿಗಾ ವಹಿಸುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.