Home ರಾಜ್ಯ ನಷ್ಟದ ನೆಪವೊಡ್ಡಿ ನೌಕರರನ್ನು ಹೊರದಬ್ಬಿದ ಜಿಂದಾಲ್ ಕಾರ್ಖಾನೆ!

ನಷ್ಟದ ನೆಪವೊಡ್ಡಿ ನೌಕರರನ್ನು ಹೊರದಬ್ಬಿದ ಜಿಂದಾಲ್ ಕಾರ್ಖಾನೆ!

ಬಳ್ಳಾರಿ: ದೇಶದ ಪ್ರತಿಷ್ಠಿತ ಉಕ್ಕು ಕಾರ್ಖಾನೆ ಜಿಂದಾಲ್ ಕಾರ್ಖಾನೆ ತನ್ನ ನೂರಾರು ಕಾರ್ಮಿಕರನ್ನು ಧಿಡೀರ್ ಕೆಲಸದಿಂದ ಕಿತ್ತು ಹಾಕಿದೆ. ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಬಳ್ಳಾರಿಯಲ್ಲಿ ಜಿಂದಾಲ್ ವಿರುದ್ಧ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ.

ನಷ್ಟದ ನೆಪವೊಡ್ಡಿ ಕಾರ್ಮಿಕರನ್ನು ಸುಖಾಸುಮ್ಮನೆ ಕೆಲಸದಿಂದ ತೆಗೆಯಲಾಗಿದೆ, ಕಳೆದ ಇಪ್ಪತ್ತೈದು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಅಷ್ಟು ವರ್ಷ ಲಾಭ ಮಾಡಿಲ್ಲವೆ? ಈಗ ಸಂಕಷ್ಟ ಸಮಯದಲ್ಲಿ ಕೈ ಹಿಡಿಯಬೇಕಾದ ಕಾರ್ಖಾನೆ ಕಾರ್ಮಿಕರನ್ನು ಹೊರದಬ್ಬಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡೆ ಹಾಗೂ ಬೇರೆ ವಲಯಗಳಲ್ಲಿ ಹೂಡಿಕೆ ಮಾಡಿ ಜಿಂದಾಲ್ ನಷ್ಟ ಅನುಭವಿಸಿ ಈಗ ಅದನ್ನು ಉಕ್ಕು ಕಾರ್ಖಾನೆ ನೌಕರರ ತಲೆಗೆ ಕಟ್ಟುತ್ತಿದ್ದಾರೆ. ಇದು ಸರಿಯಾದುದಲ್ಲ, ಕಾರ್ಖಾನೆ ಕಾರ್ಮಿಕರ ಹಿತ ಕಾಪಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಪ್ರತಿಭಟನೆಗೆ ಇಳಿದಿರುವ ನೌಕರರು ತಮ್ಮನ್ನು ಕೂಡಲೇ ಕೆಲಸಕ್ಕೆ ಮರು ನೇಮಿಸಿಕೊಳ್ಳಬೇಕು ಇಲ್ಲವೇ ಸೂಕ್ತ ಪರಿಹಾರ ಕೊಡಬೇಕು ಎಂದು ಪಟ್ಟು ಹಿಡಿದು ಕಾರ್ಖಾನೆ ಮುಂಭಾಗ ಪ್ರತಿಭಟನೆ ಮಾಡ್ತಿದಾರೆ.

-ಅರುಣ್ ನವಲಿ

LEAVE A REPLY

Please enter your comment!
Please enter your name here

- Advertisment -

Most Popular

‘ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡುತ್ತಿದ್ದ ರೈತರ ಬಂಧನ‘

ಬೆಳಗಾವಿ: ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡುತ್ತಿದ್ದ 20ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂದಿಸಿದ್ದಾರೆ.   ಇಂದು ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶ ವಿರೋಧಿಸಿ...

 RAF ಘಟಕ ಶಂಕುಸ್ಥಾಪನೆ ವೇಳೆ ಕನ್ನಡಕ್ಕೆ ಒತ್ತು ನೀಡಿಲ್ಲ: ಹೆಚ್.ಡಿ.ಕೆ.

ಶಿವಮೊಗ್ಗ: ಶಿವಮೊಗ್ಗದ ಭದ್ರಾವತಿಯಲ್ಲಿ ಆರ್.ಎ.ಎಫ್. ಘಟಕ ಶಂಕುಸ್ಥಾಪನೆ ವಿಚಾರಕ್ಕೆ ಹೆಚ್.ಡಿ.ಕೆ. ಆಕ್ರೋಶ ವ್ಯಕಪಡಿಸಿದ್ದಾರೆ. ಶಂಕುಸ್ಥಾಪನೆ ವೇಳೆ ಫಲಕಗಳನ್ನು ಕನ್ನಡದಲ್ಲಿ ಹಾಕಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ.ಕೆ.,...

‘ಕೇಂದ್ರ ಗೃಹ ಸಚಿವರ ಆಗಮನಕ್ಕೆ ರೈತರ ವಿರೋಧ’

ಬೆಳಗಾವಿ: ಇಂದು ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶಕ್ಕೆ ಅಮಿತ್ ಶಾ ಆಗಮನ ಹಿನ್ನಲೆಯಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ. ಕೇಂದ್ರದ ಹೊಸ ಕೃಷಿ ಕಾಯ್ದೆಗೆ...

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

Recent Comments