ಕ್ರೀಡೆಗಿಂತ ಬೇಕರಿ ಕೆಲಸವೇ ಬೆಸ್ಟ್​ ಅಂದ ನ್ಯೂಜಿಲೆಂಡ್ ಆಲ್​​ರೌಂಡರ್..!

0
2271

ವರ್ಲ್ಡ್​ಕಪ್​ನಲ್ಲಿ ಅದ್ಭುತ ಪ್ರದರ್ಶ ನೀಡಿದ್ರೂ ಅದೃಷ್ಟ ತಮ್ಮ ಪರ ಇಲ್ದೇ ಇದ್ದಿದ್ರಿಂದ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಮಿಸ್ ಮಾಡಿಕೊಂಡ ನ್ಯೂಜಿಲೆಂಡ್​​ಗೆ ಸೋಲನ್ನು ಅರಗಿಸಿಕೊಳ್ಳೋದು ಕಷ್ಟ ಆಗ್ತಿದೆ. ಸತತ ಎರಡು ಬಾರಿ ಅಂತಿಮ ಮ್ಯಾಚ್​ನಲ್ಲಿ ನಿರಾಸೆಯನ್ನು ಅನುಭವಿಸಿದೆ. 2015ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದ ನ್ಯೂಜಿಲೆಂಡ್, ಈ ಬಾರಿ ಇಂಗ್ಲೆಂಡ್​ ವಿರುದ್ಧ ಅದೃಷ್ಟ ಕೈ ಕೊಟ್ಟಿತು.
ಸೋಲಿನ ಬಳಿಕ ನ್ಯೂಜಿಲೆಂಡ್ ಆಲ್​​ರೌಂಡರ್ ಜಿಮ್ಮಿ ನೀಶಮ್​ ಬೇಸರದಿಂದ ಟ್ವೀಟ್ ಮಾಡಿದ್ದಾರೆ. ಒಂದು ಟ್ವೀಟ್​ನಲ್ಲಿ ” ತುಂಬಾ ನೋವುಂಟಾಗಿದೆ. ಮುಂದಿನ ಒಂದು ದಶಕದವರೆಗೂ ನಾನು ಇಲ್ಲಿನ ಅರ್ಧಗಂಟೆಯ ಆಟವನ್ನು ನೆನೆಯಲ್ಲ. ಇಂಗ್ಲೆಂಡ್​ಗೆ ಶುಭಾಶಯಗಳು. ಗೆಲುವು ನಿಮ್ಗೆ ಅರ್ಹವಾಗಿದೆ” ಅಂದಿದ್ದಾರೆ.
ಇನ್ನೊಂದು ಟ್ವೀಟ್​ನಲ್ಲಿ, ”ನಮ್ಮ ಟೀಮ್​ಗೆ ಬೆಂಬಲ ನೀಡಿದ ಎಲ್ರಿಗೂ ಧನ್ಯವಾದಗಳು. ದಿನವಿಡೀ ನಿಮ್ಮ ಧ್ವನಿ ನಮ್ ಕಿವಿ ಮುಟ್ಟುತ್ತಿತ್ತು. ನಾವು ಕೂಡ ಗೆದ್ದೇ ತೀರುವುದು ಅಂತ ಡಿಸೈಡ್ ಮಾಡಿ ಆಟ ಆಡಿದ್ವಿ. ಆದ್ರೆ ಜಯ ದಕ್ಕಿಸಿಕೊಳ್ಳಳಲು ಸಾಧ್ಯವಾಗ್ಲಿಲ್ಲ. ಮಕ್ಕಳೇ ಕ್ರೀಡೆಯನ್ನು ನಿಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಬೇಡಿ. ಅದರ ಬದಲಿಗೆ ಬೇಕರಿ ಕೆಲಸ ಬೇಕಾದ್ರು ಆಯ್ಕೆ ಮಾಡ್ಕೊಳ್ಳಿ” ಅಂತ ನೋವನ್ನು ಹೊರಹಾಕಿದ್ದಾರೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 241ರನ್ ಮಾಡಿತ್ತು. ಚೇಸ್ ಮಾಡಿದ ಇಂಗ್ಲೆಂಡ್​ ಕೂಡ ಅಷ್ಟೇ ರನ್ ಪೇರಿಸಿತು. ಸೂಪರ್ ಓವರ್​ನಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 15ರನ್ ಮಾಡಿತು. ನ್ಯೂಜಿಲೆಂಡ್ ಕೂಡ ಅಷ್ಟೇ ರನ್ ಮಾಡಿತು. ಅಂತಿಮವಾಗಿ ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್​ಗೆ ವಿಜಯಲಕ್ಷ್ಮಿ ಒಲಿದಳು.

LEAVE A REPLY

Please enter your comment!
Please enter your name here