ಮಂಡ್ಯ : ಮೈಸೂರಿನಿಂದ ಮಂಡ್ಯ ಬಸರಾಳು ಚಿನ್ನದ ಅಂಗಡಿಗೆ ಚಿನ್ನ ಸಾಗಿಸುವ ವೇಳೆ ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ ಮಂಡ್ಯ ತಾಲ್ಲೂಕಿನ ಗಂಟಗೌಡನಹಳ್ಳಿಯಲ್ಲಿ ನಡೆದಿದೆ.
ಮೈಸೂರಿನ ರಿಷಬ್ ಜುವೆಲರ್ಸ್ ನ ಚಿನ್ನಾಭರಣ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವಿಶೇಷ ತಂಡ ರಚಿಸಿದ್ದ ಎಸ್ಪಿ ಡಿವೈಎಸ್.ಪಿ ಮಂಜುನಾಥ್ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ಮಾಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ರಮೇಶ್,ಪ್ರಕಾಶ್,ವರಣ್ ಕುಮಾರ್,ಪುನೀತ್ ಗೂಳಿ,ರಾಜು ಬಂಧಿತ ಆರೋಪಿಗಳನ್ನು ಬಂಧಿಸಲಾಗಿದೆ.
ಮೈಸೂರಿನ ರಿಷಬ್ ಜುವೆಲರ್ಸ್ ನಲ್ಲಿ 14 ವರ್ಷ ಕೆಲಸ ಮಾಡಿದ್ದ ರಮೇಶ್. ಕೆಲಸ ಬಿಟ್ಟ ನಂತಹ ರಮೇಶ್ ದರೋಡೆ ಮಾಡಲು ಪ್ರಾರಂಭಿಸಿದ್ದಾನೆ. ಆರೋಪಿಗಳಿಂದ ಸುಮಾರು 3 ಕೆ.ಜಿ.100 ಗ್ರಾಂ ಚಿನ್ನಾಭರಣ, 80 ಲಕ್ಷ ಮೌಲ್ಯದ 3 ಕೆ.ಜಿ.100 ಗ್ರಾಂ ಚಿನ್ನ, 50 ಸಾವಿರ ನಗದು, ಸೇರಿ ಕಾರು ಬೈಕ್ ವಶ ಪಡಿಸಲಾಗಿದ್ದು, ಪೊಲೀಸರ ಕಾರ್ಯಕ್ಕೆ ಎಸ್ಪಿ ಎನ್ ಯತೀಶ್ ಪ್ರಶಂಸೆ ವ್ಯಕ್ತಪಡಿಸಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡಕ್ಕೆ 25 ಸಾವಿರ ನಗದು ಬಹುಮಾನವನ್ನು ನೀಡಲಾಗಿದೆ.