ಇಂದಿನಿಂದ ಜೆಡಿಎಸ್​ ಮತಬೇಟೆ ಆರಂಭ..!

0
271

ಹಾಸನ: ಹಾಸನದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಇಂದು ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಇಂದಿನಿಂದ ಜೆಡಿಎಸ್ ಮತಬೇಟೆ ಆರಂಭವಾಗಲಿದೆ. ಜೆಡಿಎಸ್​ ನಾಯಕರು ಇಷ್ಟ ದೈವಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಲಿದ್ದಾರೆ. ಮೂಡಲಹಿಪ್ಪೆ ಶ್ರೀ ಚನ್ನಕೇಶವನಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ.

ಅಧಿಕೃತವಾಗಿ ಪ್ರಜ್ವಲ್ ರೇವಣ್ಣ ಅವರು ಲೋಕಸಭಾ ರಣಕಣಕ್ಕೆ‌ ಧುಮುಕಲಿದ್ದಾರೆ. ಭವಾನಿ ರೇವಣ್ಣ ಮನೆಯಲ್ಲೂ ವಿಶೇಷ ಪೂಜೆ ನಡೆಸಿದ್ದು, ಬೆಳ್ಳಿ ಲೋಟದಲ್ಲಿ ಹಾಲು ಕುಡಿಸಿ ಮಗನಿಗೆ ಶುಭ ಕೋರಿದ್ದಾರೆ. ಜೆಡಿಎಸ್​ ಸಂಭಾವ್ಯ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಪ್ರಚಾರ ಆರಂಭಿಸುವ ಮುನ್ನ ಮಂಗಳಮುಖಿಯರು ಆರತಿ ಬೆಳಗಿ ಆಶಿರ್ವಾದ ಮಾಡಿದ್ದಾರೆ. 

LEAVE A REPLY

Please enter your comment!
Please enter your name here