ಬಿಜೆಪಿಯವ್ರು ಸಿಎಂ ಮಾಡ್ತೀನಂದ್ರೂ ಹೋಗಲ್ಲ: ನಾರಾಯಣ ಗೌಡ

0
257

ಬೆಂಗಳೂರು: “ಅನಾರೋಗ್ಯದ ಹಿನ್ನೆಲೆ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಬಿಜೆಪಿಯವರು ನನ್ನನ್ನ ಸಿಎಂ ಮಾಡ್ತೀನಿ ಅಂದ್ರು ನಾನು ಹೋಗಲ್ಲ” ಅಂತ ಕೆ.ಆಎರ್​ ಪೇಟೆ ಜೆಡಿಎಸ್​ ಶಾಸಕ ನಾರಾಯಣ ಗೌಡ ಹೇಳಿದ್ದಾರೆ. ಅವರು ನಿನ್ನೆ ತಡರಾತ್ರಿ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ಶಾಸಕ ನಾರಾಯಣ ಗೌಡ ಅವರು ಆಪರೇಷನ್​ ಕಮಲಕ್ಕೆ ಒಳಗಾಗಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿ, “ನನ್ನನ್ನು ಕೊಂಡುಕೊಳ್ಳುವ ತಾಕತ್ ಬಿಜೆಪಿಗಿಲ್ಲ. ಬಿಜೆಪಿಯ 10 ಶಾಸಕರನ್ನು ಕರೆತರುವ ಸಾಮರ್ಥ್ಯ ನನಗಿದೆ. ನನ್ನ ಎಲ್ಲ ವ್ಯವಹಾರಗಳು ಮುಂಬೈನಲ್ಲಿವೆ. ಹೀಗಾಗಿ ಮುಂಬೈಗೂ ನನಗೂ ನಂಟಿದೆ. ನಾನು ಮುಂಬೈನಲ್ಲಿದ್ರೂ ಕುಮಾರಣ್ಣನ ಸಂಪರ್ಕದಲ್ಲಿದ್ದೆ” ಅಂತ ನಾರಾಯಣ ಗೌಡ ಹೇಳಿದ್ದಾರೆ.

LEAVE A REPLY

Please enter your comment!
Please enter your name here