Sunday, May 29, 2022
Powertv Logo
Homeರಾಜ್ಯಪ್ರತಾಪ್ ಸಿಂಹ 'ಸಿಂಹದ ಮರಿ' : ಜಿ.ಟಿ.ದೇವೇಗೌಡ

ಪ್ರತಾಪ್ ಸಿಂಹ ‘ಸಿಂಹದ ಮರಿ’ : ಜಿ.ಟಿ.ದೇವೇಗೌಡ

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರನ್ನು ಸಿಂಹದ ಮರಿ ಎಂದು ಜೆಡಿಎಸ್​​ ಶಾಸಕ ಜಿ.ಟಿ.ದೇವೇಗೌಡ ಹಾಡಿಹೊಗಳಿದ್ದಾರೆ.

ಪಿರಿಯಾಪಟ್ಟಣದಲ್ಲಿ ಮಾತನಾಡಿದ ಅವರು ಸಂಸದ ಪ್ರತಾಪ್ ಸಿಂಹ ಕ್ಷೇತ್ರಕ್ಕೆ ಬರ್ತಾನೆ ಇರ್ತಾರೆ, ಅಂತಹ ಎಂಪಿನ ನೀವು ಪಡೆದಿದ್ದೀರಾ ಎಂದು ಸಂಸದರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿಯವರನ್ನು ಯಾರಾದ್ರೂ ಎಂಪಿ ನೇರವಾಗಿ ಭೇಟಿ ಆಗೋಕೆ ಆಗುತ್ತೇನ್ರಿ ಎಂದು ಪ್ರಶ್ನಿಸಿರುವ ಜಿ.ಟಿ.ದೇವೇಗೌಡ, ಪ್ರತಾಪ್​​ ಸಿಂಹ ಹೆಂಡ್ತಿ ಮಕ್ಕಳ ಜೊತೆಗೆ ನೇರವಾಗಿ ಪ್ರಧಾನಿ ಭೇಟಿಯಾಗ್ತಾರೆ. ಅವರಿಗೆ ಪ್ರಧಾನಿ ಜೊತೆಗೆ ಎಲ್ಲರಿಗಿಂತ ಉತ್ತಮ ಒಡನಾಟವಿದೆ ಎಂದಿದ್ದಾರೆ.

- Advertisment -

Most Popular

Recent Comments