ಸಿಎಂ ಪತ್ನಿಗೆ ಜೆಡಿಎಸ್ ಕಾರ್ಯಕರ್ತನ ತರಾಟೆ

0
283

ರಾಮನಗರ: ಸಿಎಂ ಕುಮಾರಸ್ವಾಮಿ ಪತ್ನಿಯನ್ನು ಜೆಡಿಎಸ್​ ಕಾರ್ಯಕರ್ತನೊಬ್ಬ ತರಾಟೆಗೆ ತೆಗದುಕೊಂಡಿರೋ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರದಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಲು ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿಗೆ ಕಾರ್ಯಕರ್ತನೊಬ್ಬ ದಂಬಾಲು ಬಿದ್ದಿದ್ದಾನೆ. “ನಿಮ್ಮ ಮಾವನವರಿಗಾಗಿ ಹಗಲು ರಾತ್ರಿ ಪ್ರಚಾರ ಮಾಡಿದ್ದೇವೆ. ನಿಮ್​ ಯಜಮಾನ್ರು ಮತ್ತು ನಿಮಗಾಗಿ ಸಾಕಷ್ಟು ಪ್ರಚಾರ ಮಾಡಿದ್ದೇವೆ. ಆ ಋಣಕ್ಕಾದ್ರೂ ನಮ್ಮ ಕೆಲಸ ಮಾಡಿಕೊಡಿ” ಅಂತ ಕಾರ್ಯಕರ್ತ ಸಿಎಂ ಪತ್ನಿಗೆ ಒತ್ತಾಯಿಸಿದ್ದಾನೆ. 600 ನೌಕರರನ್ನು ಖಾಯಂ ಮಾಡುವಂತೆ ಕಾರ್ಯಕರ್ತ ದುಂಬಾಲು ಬಿದ್ದಿದ್ದು, ನಿಮ್ಮನ್ನು ಕೇಳದೇ ಮತ್ಯಾರನ್ನು ಕೇಳೋಣ ಅಂತ ಶಾಸಕಿ ಅನಿತಾ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಗುತ್ತಿಗೆ ನೌಕರನಾಗಿರುವ ಜೆಡಿಎಸ್ ಕಾರ್ಯಕರ್ತನ ಸಿಎಂ ಪತ್ನಿಗೇ ಕ್ಲಾಸ್ ತೆಗೆದುಕೊಂಡಿದ್ಧಾರೆ.

LEAVE A REPLY

Please enter your comment!
Please enter your name here