ಬೆಂಗಳೂರು: ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೊಬೈಲ್ ಕಾಲರ್ ಟ್ಯೂನ್ ಮೂಲಕ ಮುನ್ನೆಚ್ಚರಿಕೆಯ ಸಂದೇಶವನ್ನು ನೀಡಲಾಗುತ್ತಿದೆ. ಇದೀಗ ಈ ಸಂದೇಶವನ್ನು ಕನ್ನಡದಲ್ಲಿ ನೀಡುವಂತೆ ಜೆಡಿಎಸ್ ಆಗ್ರಹಿಸಿದೆ.
ಕಾಲರ್ ಟ್ಯೂನ್ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಕೊರೋನಾ ವೈರಸ್ ತಡೆಗಟ್ಟುವ ಬಗ್ಗೆ ಮೊಬೈಲ್ ಕರೆ ಮಾಡುವಾಗ ಮಾಹಿತಿ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಈ ಮಾಹಿತಿ ಕೇವಲ ಇಂಗ್ಲೀಷ್ ಭಾಷೆಗೆ ಸೀಮಿತವಾಗಿದೆ. ಕರ್ನಾಟಕದ ಮೊಬೈಲ್ ಬಳಕೆದಾರರಿಗೆಲ್ಲರಿಗೂ ಇಂಗ್ಲೀಷ್ ಅರ್ಥವಾಗುತ್ತದೆಯೇ? ಇಲ್ಲ. ಹಾಗಾದರೆ ಇಂಗ್ಲೀಷ್ ಗೊತ್ತಿಲ್ಲದ ಕನ್ನಡಿಗರ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕೊರೋನಾ ವೈರಸ್ ಮಾಹಿತಿಯನ್ನು ಕನ್ನಡದಲ್ಲೂ ನೀಡಿ ಎಂದು ಒತ್ತಾಯಿಸಿದೆ.
ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಬಗ್ಗೆ ಮೊಬೈಲ್ ಕರೆ ಮಾಡುವಾಗ ಮಾಹಿತಿ ನೀಡುತ್ತಿರುವುದು ಸ್ವಾಗತಾರ್ಹ.
ಆದರೆ ಈ ಮಾಹಿತಿ ಕೇವಲ ಆಂಗ್ಲ ಭಾಷೆಗೆ ಮಾತ್ರ ಸೀಮಿತವಾಗಿದೆ, ಕರ್ನಾಟಕದ ಎಲ್ಲಾ ಮೊಬೈಲ್ ಚಂದಾದಾರರಿಗೂ ಇಂಗ್ಲಿಷ್ ಅರ್ಥವಾಗುತ್ತದೆಯೇ? ಇಲ್ಲ, ಇಂಗ್ಲಿಷ್ ಬಾರದ ಕನ್ನಡಿಗರ ಜೀವಕ್ಕೆ ಬೆಲೆ ಇಲ್ಲವೇ? ಮಾಹಿತಿ ಕನ್ನಡದಲ್ಲೂ ನೀಡಿ.
— Janata Dal Secular (@JanataDal_S) March 11, 2020