ಹೆಚ್​ಡಿಡಿ, ಹೆಚ್​ಡಿಕೆ ನೇತೃತ್ವದಲ್ಲಿ ಜೆಡಿಎಲ್​ಪಿ ಸಭೆ – ಯಾವೆಲ್ಲಾ ವಿಷಯಗಳ ಚರ್ಚೆ ಆಗುತ್ತೆ?

0
156

ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ್ರು ಹಾಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ಜೆಡಿಎಲ್​ಪಿ ಸಭೆ ನಡೆಯಲಿದೆ.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಜೆಪಿನಗರದ ನಿವಾಸದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಎಲ್ಲಾ ಜೆಡಿಎಸ್​​​ ಶಾಸಕರು ಹಾಜರಿರಲಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡುವ ಸಾಧ್ಯತೆಗಳಿದ್ದು, ಪ್ರಮುಖವಾಗಿ ಪದೇ ಪದೇ ಮೈತ್ರಿ ಸರ್ಕಾರದಲ್ಲಿ ಉಟಾಂಗುತ್ತಿರುವ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆಯಾಗಲಿದೆ. ಸಚಿವ ಸಂಪುಟ ವಿಸ್ತರಿಸಿದ್ರೆ ಯಾರಿಗೆ ಸ್ಥಾನ ಕೊಡಬೇಕು? ತಮ್ಮ ಮುಂದಿನ ನಡೆ ಹೇಗಿರಬೇಕು. ಸ್ವ-ಪಕ್ಷದ ಶಾಸಕರ ನಡುವಿನ ಭಿನ್ನಾಭಿಪ್ರಾಯಗಳೇನು? ಹಾಗೂ ‘ಆಪರೇಷನ್ ಕಮಲ’ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಅಂತ ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here