ವೇಗಿ ಬುಮ್ರಾ ರೆಕಾರ್ಡ್​ಗೆ ಕಾರಣವಾಯ್ತು ಕ್ಯಾಪ್ಟನ್ ಕೊಹ್ಲಿ ಅಪೀಲ್..!

0
791

ಕಿಂಗ್​ಸ್ಟನ್​ : ಅತಿಥೇಯ ವೆಸ್ಟ್ ಇಂಡೀಸ್​ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ವೇಗಿ ನೂತನ ದಾಖಲೆಯನ್ನು ಬರೆದಿದ್ದಾರೆ. ತಮ್ಮ ಮೊದಲ ಇನ್ನಿಂಗ್ಸ್​ ಆರಂಭಿಸಿದ ವಿಂಡೀಸ್​ಗೆ ಸಿಂಹಸ್ವಪ್ನವಾಗಿ ಕಾಡಿದ ಅವರು ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಪಡೆದು ಮಿಂಚಿದ್ದಾರೆ. ಇದರೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಭಾರತೀಯ ಅನ್ನೋ ಕೀರ್ತಿಗೆ ಬುಮ್ರಾ ಪಾತ್ರರಾಗಿದ್ದಾರೆ. ಈ ಮೊದಲು ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಈ ಸಾಧನೆ ಮಾಡಿದ್ದರು.
ಟೆಸ್ಟ್ ರ್ಯಾಕಿಂಗ್​ನಲ್ಲಿ 7ನೇ ಸ್ಥಾನದಲ್ಲಿರುವ ಬುಮ್ರಾ 7ನೇ ಓವರ್​ನಲ್ಲಿ ಜಾನ್​ ಕ್ಯಾಂಬೆಲ್​ರನ್ನು ಕಾಟ್​ಬಿಹೈಂಡ್ ​ ಮಾಡೋ ಮೂಲಕ ಮೊದಲ ವಿಕೆಟ್ ಪಡೆದ್ರು. ಬೆನ್ನಲ್ಲೇ ಡರೇನ್​ ಬ್ರಾವೋ ಸ್ಲಿಪ್​ನಲ್ಲಿದ್ದ ಕನ್ನಡಿಗ ಕೆ.ಎಲ್ ರಾಹುಲ್​ಗೆ ಕ್ಯಾಚ್​ ನೀಡಿ ಬುಮ್ರಾಗೆ ಎರಡನೇ ಬಲಿಯಾದ್ರು. ನಂತರದ ಬಾಲ್​ನಲ್ಲಿ ರೋಸ್ಟನ್​ ಛೇಸ್​​ರನ್ನು ಎಲ್​ಬಿಡಬ್ಲ್ಯು ಬಲೆಗೆ ಕೆಡವಿದ್ರು. ಬುಮ್ರಾ ಛೇಸ್​ರನ್ನು ಎಲ್​ಬಿಗೆ ಕೆಡವಿದಾಗ ಅಂಪೈರ್​ ಪೌಲ್​ ರಾಯ್ಫ್​ಪೇಲ್​ ನಾಟ್​ ಔಟ್ ಅಂದಿದ್ದರು. ಆಗ ಕ್ಯಾಪ್ಟನ್ ಕೊಹ್ಲಿ ರಿವ್ಯೂ ಮನವಿ ಮಾಡಿದ್ರು. ಆಗ ಥರ್ಡ್​ ಅಂಪೈರ್ ಕಡೆಯಿಂದ ಛೇಸ್ ಔಟ್​ ಅನ್ನೋ ತೀರ್ಪು ಬಂತು..! ಹೀಗೆ ಕ್ಯಾಪ್ಟನ್ ಕೊಹ್ಲಿ ಮಾಡಿದ ಮನವಿ ಬುಮ್ರಾ ರೆಕಾರ್ಡ್​​ಗೆ ಕಾರಣವಾಯ್ತು.
ಇನ್ನು ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 416ರನ್​ಗೆ ಆಲ್​ಔಟ್ ಆಗಿದ್ದು, ವಿಂಡೀಸ್ 87ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

LEAVE A REPLY

Please enter your comment!
Please enter your name here