Tuesday, January 25, 2022
Powertv Logo
HomePower Specialವಿಚಿತ್ರ ವಾಹನ ಕಂಡು ಅಚ್ಚರಿ ಪಟ್ರು ಜನ

ವಿಚಿತ್ರ ವಾಹನ ಕಂಡು ಅಚ್ಚರಿ ಪಟ್ರು ಜನ

ಜಪಾನ್.. ಈ ಪುಟ್ಟ ರಾಷ್ಟ್ರದ ಹೆಸರಿಗೂ ಆವಿಷ್ಕಾರಕ್ಕೂ ಅವಿನಾಭಾವದ ಸಂಬಂಧ ಅಂತ ಕಾಣುತ್ತದೆ. ಈ ರೀತಿ ಅನುಮಾನ ಮೂಡೋದಕ್ಕೆ ಕಾರಣ, ಆ ರಾಷ್ಟ್ರದಲ್ಲಿನ ನಡೆಯುವ ಅವಿಷ್ಕಾರಗಳು. ಇವತ್ತಿಗೂ ಈ ಪುಟ್ಟ ರಾಷ್ಟ್ರ ಸಾಕಷ್ಟು ಅವಿಷ್ಕಾರವನ್ನ ನಡೆಸುತ್ತಿದೆ. ಜಪಾನ್​ನಲ್ಲಿ ಒಂದು ವರ್ಷಕ್ಕೆ ಒಂದು ಲಕ್ಷದ ನಲ್ವತ್ತು ಸಾವಿರಕ್ಕೂ ಅಧಿಕ ಪೇಟೆಂಟ್​ಗಳನ್ನ ನೀಡಲಾಗುತ್ತದೆ.

ಇದೊಂದೇ ವಿಚಾರವೇ ಹೇಳುತ್ತೆ ಜಪಾನ್​ ಯಾವ ರೀತಿಯಾಗಿ ಅವಿಷ್ಕಾರಗಳಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿದೆ ಅಂತಾ ತನ್ನ ಅಕ್ಕಪಕ್ಕದಲ್ಲಿ ಶತ್ರು ರಾಷ್ಟ್ರಗಳಿದ್ದರೂ ಅವುಗಳಿಗೆ ಸದಾ ಟಾಂಗ್​ ನೀಡುವ ಜಪಾನ್​ ಹಲವು ವಿಚಾರಗಳಲ್ಲಿ ತನ್ನನ್ನ ತಾನು ಬಲಿಷ್ಠಗೊಳಿಸಿಕೊಂಡಿದೆ. ಹೀಗಾಗಿ ತಂತ್ರಜ್ಞಾನದ ವಿಚಾರದಲ್ಲಿ ತನ್ನನ್ನ ಯಾರು ಕೂಡ ಮೀರಿಸಲಾಗದಿರುವ ಎತ್ತರಕ್ಕೆ ಹೋಗಿ ತಲುಪಿದೆ. ಇದೇ ವಿಚಾರಕ್ಕೆ ಜಪಾನ್​ ಕಂಪನಿಗಳು ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಬಹುದೊಡ್ಡ ಹೆಸರು ಸಾಧಿಸಿಕೊಂಡು ಬಂದಿದೆ.
ಹೀಗಾಗಿ ತಂತ್ರಜ್ಞಾನದ ವಿಚಾರದಲ್ಲಿ ಜಪಾನ್​ ಅನ್ನ ಮೀರಿಸೋದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ. ಸದ್ಯಕ್ಕೆ ಇದೀಗ ಇದೇ ಜಪಾನ್​ನ ನೆರವಿನಿಂದ ಭಾರತ ಬುಲೆಟ್​ ಟ್ರೈನ್​ಗೆ ಅಡಿಪಾಯವನ್ನ ಕೂಡ ಹಾಕ್ತಾ ಇದೆ. ವಿವಿಧ ದೇಶಗಳ ರೈಲ್ವೆ ಯೋಜನೆಗಳ ಟೆಂಡರ್​​ನಲ್ಲಿ ಭಾಗವಹಿಸುವ ಜಪಾನ್​, ಈಗ ತನ್ನ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಮಹಾ ಕ್ರಾಂತಿಯನ್ನ ಮಾಡೋದಕ್ಕೆ ಹೊರಟಿದೆ. ಇತ್ತೀಚೆಗೆ ಭಾರತ ಹಾಗು ದುಬೈನಲ್ಲಿ ಹೈಪರ್​ಲೂಪ್​ ಪ್ರಯೋಗಗಳು ನಡೆಯುತ್ತಿರುವ ಹೊತ್ತಿನಲ್ಲಿ, ಜಪಾನ್​ ಈಗ ಡುವೆಲ್​ ಮೋಡ್​ ವೆಹಿಕಲ್​ ಅನ್ನ ಜಗತ್ತಿಗೆ ಪರಿಚಯಿಸಿದೆ. ಈ ವಾಹನವನ್ನ ರಸ್ತೆ ಹಾಗು ರೈಲಿನಲ್ಲಿ ಓಡಿಸಬಹುದಾಗಿದ್ದು, ಈ ಹೊಸ ರೈಲ್​ಬಸ್​ ಅನ್ನ ಡಿಸೆಂಬರ್​​ 25ರಂದು ಲಾಂಚ್​ ಮಾಡಲಾಗಿದೆ.

ಸದ್ಯಕ್ಕೆ ಈ ರೈಲ್​ಬಸ್​ ಮಿನಿಬಸ್​ನ ಗಾತ್ರದಲ್ಲಿದ್ದು, ಈ ರೈಲ್​ಬಸ್​ ರಸ್ತೆಗಳಲ್ಲಿ ಓಡುವಾಗ ರಬ್ಬರ್ ಟೈಯರ್​ಗಳನ್ನ ಬಳಸುತ್ತದೆ ರೈಲ್ವೇ ಹಳಿಯಲ್ಲಿ ಈ ಬಸ್ ಸ್ಟೀಲ್ ಚಕ್ರ ಬಳಸಿ ಚಲಿಸಲಿದೆ. ಆ ಮೂಲಕ ದ್ವಿಸಾರಿಗೆ ವ್ಯವಸ್ಥೆಗೆ ಅನುಕೂಲವಾಗುವ ವಾಹನವನ್ನ ಜಪಾನ್​ ಪರಿಚಯಿಸಿದೆ. ಈಗಾಗಲೇ ಜಪಾನ್​ ಈ ವಾಹನವನ್ನ ಅಧಿಕೃತವಾಗಿ ತನ್ನ ಸಾರಿಗೆ ವ್ಯವಸ್ಥೆಗೆ ಕೂಡ ಸೇರಿಸಿಕೊಂಡಿದೆ. ಸದ್ಯಕ್ಕೆ ಈ ರೈಲ್​ಬಸ್​ನ್ನ ಸಾರಿಗೆ ಸಾಧನಗಳು ಕಡಿಮೆ ಇರುವ ಸ್ಥಳಗಳಲ್ಲಿ ಬಳಸಬಹುದಾಗಿದೆ. ರಸ್ತೆಗಳು ಮತ್ತು ರೈಲು ಹಳಿಗಳನ್ನು ಸಮಾನಾಂತರವಾಗಿ ಹಾಕುವ ಸ್ಥಳಗಳಿಗೆ ಈ ಡ್ಯುಯಲ್ ಮೋಡ್ ವಾಹನವು ತುಂಬಾ ಸೂಕ್ತವಾಗಿದೆ. ಇದೀಗ ಈ ಡ್ಯುಯಲ್ ಮೋಡ್ ವಾಹನವನ್ನ ಆಸಾ ಕೋಸ್ಟ್ ರೈಲ್ವೆ ಕಂಪನಿಯ ಮುಖ್ಯಸ್ಥರು ನಿರ್ವಹಿಸುತ್ತಿದೆ. ಈ ಸಂಸ್ಥೆಯ ಅಧಿಕಾರಿಗಳು ಹೇಳಿರುವ ಪ್ರಕಾರ ರಸ್ತೆ ವ್ಯವಸ್ಥೆಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಹಾಗಾಗಿ ಸಾರಿಗೆಯಲ್ಲಿ ಬಳಸೋದಕ್ಕೆ ಈ ವಾಹನ ಸೂಕ್ತವಾಗಿದೆ ಅಂತ ಮಾಹಿತಿ ನೀಡಿದೆ

ಈಗಷ್ಟೇ ಲಾಂಚ್​ ಆಗಿರುವ ಈ ಡ್ಯುಯಲ್ ಮೋಡ್ ವಾಹನದಲ್ಲಿ ಒಂದು ಬಾರಿಗೆ 21 ಪ್ರಯಾಣಿಕರು ಪ್ರಯಾಣಿಸಬಹುದು. ಇದು ರೈಲು ಹಳಿಗಳಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಚಲಿಸುತ್ತದೆ ಆದರೆ,ಆನ್-ರೋಡ್​​ನಲ್ಲಿ ಈ ವಾಹನ ಗಂಟೆಗೆ ಸುಮಾರು 100 ಕಿಮೀ ವೇಗವನ್ನು ನೀಡುತ್ತದೆಇದೀಗ ಈ ಡ್ಯುಯಲ್ ಮೋಡ್ ವೆಹಿಕಲ್ ರೈಲ್​ಬಸ್​ ಹಲವಾರು ಬಣ್ಣಗಳಲ್ಲಿ ಲಭ್ಯವಿದೆ. ಈ ರೈಲ್​ಬಸ್​​ಗಳು ಜನವರಿಯಿಂದ ಜಪಾನ್​ನ ಹಲವು ಕಡೆಗಳಲ್ಲಿ ಸಂಚರಿಸಲಿದೆ. ಮೊದಲ ಹಂತದಲ್ಲಿ ಈ ರೈಲ್​ಬಸ್​​ ದಕ್ಷಿಣ ಜಪಾನ್​ನ ಶಿಕೋಕು ದ್ವೀಪದ ಕರಾವಳಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಬಳಿಕ ಈ ಲೈಲ್​ಬಸ್​ಗಳನ್ನ ಹಲವು ಸಣ್ಣ ಪಟ್ಟಣಗಳಲ್ಲಿ ಸಾರ್ವಜನಿಕ ಸೇವೆಗೆ ನೀಡಲಾಗುತ್ತದೆ.ಇದಾದ, ಬಳಿಕ ಜಪಾನ್​ನಾದ್ಯಂತ ಈ ಬಸ್​ ಸೇವೆ ನೀಡಲಿದೆ ಅಂತ ಅಸಾ ಕೋಸ್ಟ್​ ರೈಲ್ವೆ ಕಂಪನಿ ತಿಳಿಸಿದೆ. ಹೀಗಾಗಿ ಈ ರೈಲ್​​ಬಸ್​ ಹೇಗೆ ಕಾರ್ಯ ನಿರ್ವಹಿಸಲಿದೆ ಅಂತ ಜಗತ್ತು ಬೆರಗುಗಣ್ಣಿನಿಂದ ನೋಡುವ ಹಾಗೆ ಮಾಡಿದೆ.

ಒಟ್ಟಾರೆಯಾಗಿ ಜಪಾನ್​ನ ಈ ಸಾರಿಗೆ ಕ್ರಾಂತಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಾಕಷ್ಟು ಸದ್ದು ಮಾಡ್ತಾಯಿದೆ. ಒಂದು ವೇಳೆ ಜಪಾನ್​ನಲ್ಲಿ ಈ ಸಾರಿಗೆ ವ್ಯವಸ್ಥೆ ಸಕ್ಸಸ್​ ಆಯ್ತು ಅಂದರೆ, ಇದು ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಅವಕಾಶ ನೀಡಿದ ಹಾಗೆ ಆಗುತ್ತದೆ. ಆದರೆ, ಈಗಷ್ಟೆ ಈ ರೈಲ್​​ಬಸ್​ಗಳು ಲಾಂಚ್​ ಆಗಿರೋದರಿಂದ ಜಪಾನ್​ನ ಜನರಿಂದಯಾವ ರೀತಿಯಾದ ಪ್ರತಿಕ್ರಿಯೆ ಬರಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ವಿಶೇಷ ಲೇಖನ : ಲಿಖಿತ್​ ರೈ, ಪವರ್​ ಟಿವಿ

- Advertisment -

Most Popular

Recent Comments