ಮೌನ ಮುರಿದ ಧೋನಿ : ಮುಂದಿನ ವರ್ಷ ಅಖಾಡಕ್ಕೆ ವಾಪಸ್!

0
271

ಮುಂಬೈ: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ಮಾತ್ರವಲ್ಲ ಇಡೀ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗ, ಯಶಸ್ವಿ ನಾಯಕ. ಭಾರತಕ್ಕೆ 2007ರ ಟಿ20 ಹಾಗೂ 2011ರ ಒಡಿಐ ವರ್ಲ್ಡ್​​ಕಪ್​​  ಗೆದ್ದುಕೊಟ್ಟ ಕ್ಯಾಪ್ಟನ್.

ಆದರೆ,  2019 ರ ಒಡಿಐ ವರ್ಲ್ಡ್​ಕಪ್ ಬಳಿಕ ಧೋನಿ ಒಂದೇ ಒಂದು ಮ್ಯಾಚಲ್ಲೂ ಕಾಣಿಸಿಕೊಂಡಿಲ್ಲ. ಧೋನಿ ಯಾವಾಗ ಕಮ್​ಬ್ಯಾಕ್ ಮಾಡ್ತಾರೆ ಅಂತ ಅಭಿಮಾನಿಗಳು ವ್ಹೇಟ್ ಮಾಡ್ತಿದ್ದಾರೆ. ಧೋನಿ ಯಾವಾಗ ಆಡ್ತಾರೆ ಅನ್ನೋ ಪ್ರಶ್ನೆಗೆ ಸದ್ಯ ಅವರಿಂದಲೇ ಉತ್ತರ ಸಿಕ್ಕಿದೆ. 

ಧೋನಿ ಯಾವಾಗ ಕಮ್​ ಬ್ಯಾಕ್ ಆಗೋದು ಅನ್ನೋ ವಿಚಾರವಾಗಿ ಮೌನ ಮುರಿದಿದ್ದಾರೆ. ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕಮ್​ಬ್ಯಾಕ್ ಕುರಿತು ಎದುರಾದ ಪ್ರಶ್ನೆಗೆ, ಜನವರಿವರೆಗೂ ತಂಡಕ್ಕೆ ಮರಳುವ ವಿಚಾರ ಕೇಳ್ಬೇಡಿ ಅಂತ ಹೇಳುವ ಮೂಲಕ ಜನವರಿ ಬಳಿಕ ತಂಡ ಕೂಡಿಕೊಳ್ಳೋ ಸುಳಿವು ನೀಡಿದ್ದಾರೆ. 

 

LEAVE A REPLY

Please enter your comment!
Please enter your name here