ಜೆಡಿಎಸ್​ಗೆ ದೇವೇಗೌಡರ ಪರಮಾಪ್ತ ಗುಡ್​ಬೈ..!

0
168

ದೆಹಲಿ: ಮಾಜಿ ಪ್ರಧಾನಿ, ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್​. ಡಿ ದೇವೇಗೌಡ ಅವರ ಪರಮಾಪ್ತ ಡ್ಯಾನಿಷ್‌ ಅಲಿ ಜೆಡಿಎಸ್​ ತೊರೆದಿದ್ದಾರೆ. ಜೆಡಿಎಸ್​ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಡ್ಯಾನಿಷ್​ ಅಲಿ ಉತ್ತರಪ್ರದೇಶದ ಲಖನೌನಲ್ಲಿ ಬಿಎಸ್​​ಪಿಗೆ ಸೇರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲಿ, ” ದೇವೇಗೌಡರ ಆಶೀರ್ವಾದ ಪಡೆದೇ ಬಿಎಸ್​ಪಿ ಸೇರ್ಪಡೆಯಾಗಿದ್ದೇನೆ. ನಾನು ಜೆಡಿಎಸ್​ನಲ್ಲಿದ್ದಾಗ ಏನನ್ನೂ ಕೇಳಿಲ್ಲ. ದೇವೇಗೌಡರು ಕೊಟ್ಟ ಕೆಲಸವನ್ನು ನಿಭಾಯಿಸಿದ್ದೇನೆ. ಇನ್ಮುಂದೆ ಮಾಯಾವತಿ ಅವರು ನೀಡುವ ಜವಾಬ್ದಾರಿ ನಿರ್ವಹಿಸುತ್ತೇನೆ” ಅಂತ ಹೇಳಿದ್ದಾರೆ. ಉತ್ತರ ಪ್ರದೇಶದ ಬಿಎಸ್​ಪಿ ಅಭ್ಯರ್ಥಿಯಾಗಿ ಅಲಿ ಸ್ಪರ್ಧಿಸಲಿದ್ದಾರೆ.

ಕುನ್ವಾರ್ ಡ್ಯಾನಿಷ್​​​  ಅಲಿ ಯಾರು ಗೊತ್ತಾ ?

ಜನತಾದಳದ ಜೊತೆ 25 ವರ್ಷಕ್ಕೂ ಹೆಚ್ಚುಕಾಲ ನಂಟು ಹೊಂದಿದ್ದ ಡ್ಯಾನಿಷ್ ಅಲಿ 1994ರಲ್ಲಿ ಜನತಾದಳ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ ಮಾಡಿದ್ರು. ಮಾಜಿ ಪ್ರಧಾನಿ ಹೆಚ್. ​ಡಿ. ದೇವೇಗೌಡ ಅವರ ಜೊತೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದರು. ಡ್ಯಾನಿಷ್​​​ ಅಲಿಯನ್ನ ದೇವೇಗೌಡರು ಹೆಚ್ಚು ನಂಬಿಕೊಂಡಿದ್ದರು. ಅಲಿ ಅವರು ದೇವೇಗೌಡರ ಪರಮಾಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದರು. ರಾಜ್ಯದಲ್ಲಿ ಮೈತ್ರಿ ಸರ್ಕಾರದ ರೂವಾರಿಗಳಲ್ಲಿ ಒಬ್ಬರಾದ ಅಲಿ ಅವರು, ಕೇಂದ್ರ-ರಾಜ್ಯ ನಾಯಕರ ನಡುವೆ ಸೇತುವೆಯಾಗಿ ಕೆಲಸ ಮಾಡಿದ್ದರು. ಅತ್ಯುತ್ತಮ ಸಂವಹನ ಕಲೆಯನ್ನು ಹೊಂದಿರುವ ಅಲಿ ಎಂಥದ್ದೇ ಸಂದರ್ಭದಲ್ಲೂ ಜನತಾ ದಳ ಬಿಟ್ಟಿರಲಿಲ್ಲ.

ಹಿಂದೆ 1994ರ ವಿಧಾನಸಭೆ ಚುನಾವಣೆ ವೇಳೆ ರಾಮನಗರದ ಸಭೆಯೊಂದರಲ್ಲಿ ಅಲಿ ಅಮೋಘ ಭಾಷಣ ಮಾಡಿದ್ದರು. ಅಂದು ಡ್ಯಾನೀಶ್ ಅಲಿ ಅವರ ಆಕರ್ಷಕ ಭಾಷಣ ಕೇಳಿ ದೇವೇಗೌಡರು ಫಿದಾ ಆಗಿದ್ದರು. ಅಂದಿನಿಂದ ಆರಂಭಿಸಿ 25 ವರ್ಷಗಳ ಕಾಲ ದೇವೇಗೌಡರ ಶಿಷ್ಯವಲಯದಲ್ಲಿ ಗುರುತಿಸಿಕೊಂಡಿದ್ದರು. ದೇವೇಗೌಡರು ಹೇಳಿದ ಕೆಲಸಗಳನ್ನು ಅಲಿ ಅಚ್ಚುಕಟ್ಟಾಗಿ ಮಾಡುತ್ತಿದ್ದರು.

LEAVE A REPLY

Please enter your comment!
Please enter your name here