Home ರಾಜ್ಯ 21 ಕೋಟಿ ರೆಡ್ಡಿ ಡೀಲಿಂಗ್ ಪ್ರಕರಣದ ಇಂದಿನ ಡೀಟೇಲ್ಸ್..!

21 ಕೋಟಿ ರೆಡ್ಡಿ ಡೀಲಿಂಗ್ ಪ್ರಕರಣದ ಇಂದಿನ ಡೀಟೇಲ್ಸ್..!

21 ಕೋಟಿ ಡೀಲ್ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಜನಾರ್ದನ ರೆಡ್ಡಿಗಾಗಿ ಸಿಸಿಬಿ ಪೊಲೀಸ್ರು ಹುಡುಕಾಟದಲ್ಲಿದ್ದಾರೆ. ಒಂದು ಕಡೆ ಅಲಿಖಾನ್ ಮನೆಗೆ ದಾಳಿ ಮಾಡಿ ಕೆಲ ಪ್ರಮುಖ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಇದ್ರ ಮಧ್ಯೆ ಸಿಸಿಬಿ ಪೊಲೀಸ್ರನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತರಾಟೆ ತೆಗೆದುಕೊಂಡ್ರು. ಅಲೋಕ್ ಕುಮಾರ್ ಪೊಲೀಸ್ರ ಮೇಲೇ ಸಿಟ್ಟಾಗಿದ್ದೇಕೆ..? ರೆಡ್ಡಿ ಕೇಸ್ ನ ಇಂದಿನ ಬೆಳವಣಿಗೆಗಳೇನು..? ಇವೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ನಿದ್ದೆಗೆಟ್ಟು ರೆಡ್ಡಿಯನ್ನು ಹುಡುಕುತ್ತಿದೆ ಸಿಸಿಬಿ ಟೀಮ್..! ಗಂಟೆಗೊಮ್ಮೆ ಸ್ಥಳ ಬದಲಾಯಿಸ್ತಿದ್ದಾರೆ ಜನಾರ್ದನ ರೆಡ್ಡಿ!

ಹೌದು,ನಿನ್ನೆಯಿಂದಲೂ ನಿದ್ದೆಗೆಟ್ಟು ಹಿಂದೆ ಬಿದ್ದಿರೋ ಸಿಸಿಬಿ ಪೊಲೀಸ್ರಿಗೆ ಜನಾರ್ದನ ರೆಡ್ಡಿ, ಚಳ್ಳೆಹಣ್ಣು ತಿನ್ನಿಸ್ತಿದ್ದಾರೆ. ಮೊಬೈಲ್ ಲೊಕೇಷನ್ ಹೈದ್ರಾಬಾದ್ ತೋರಿಸುತ್ತಿದ್ದು, ಹೈದ್ರಾಬಾದ್ ನಲ್ಲೇ ಗಂಟೆಗೊಮ್ಮೆ ಸ್ಥಳ ಬದಲಾಯಿಸ್ತಿದ್ದಾರೆ ಗಾಲಿ ಜನಾರ್ದನ ರೆಡ್ಡಿ. ಹೇಗಾದ್ರು ಮಾಡಿ ರೆಡ್ಡಿಯನ್ನು ಬಂಧಿಸಲೇಬೇಕು ಅಂತ ಹಠ ತೊಟ್ಟಿರೊ ಸಿಸಿಬಿ ಪೊಲೀಸರ ಒಂದು ಟೀಮ್ ರೆಡ್ಡಿ ಬೆನ್ನತ್ತಿ ಇಂಚಿಂಚೂ ಮಾಹಿತಿ ಕಲೆ ಹಾಕ್ತಿದೆ. ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ಟೀಮ್ ರೆಡ್ಡಿ ಹಿಂದೆ ಬಿದ್ದಿದೆ. ಎಸಿಪಿ ಮಂಜುನಾಥ್ ನೇತೃತ್ವದ ತಂಡ ಬಳ್ಳಾರಿಗೆ ಲಗ್ಗೆ ಇಟ್ಟು ರೆಡ್ಡಿ ಮನೆ ಪರಿಶೀಲನೆ ಮಾಡಿ ಕೆಲ ದಾಖಲಾತಿಗಳನ್ನ ವಶಕ್ಕೆ ಪಡೆದಿದೆ.
ಮನೆ ಮಹಜರ ವಿಡಿಯೋ ಸಿಸಿಬಿ ಪೊಲೀಸರಿಂದ ಲೀಕ್! ಲೀಕ್ ಮಾಡಿದ ಸಿಸಿಬಿ ಪೊಲೀಸರ ಮೇಲೆ ಆಲೋಕ್ ಕುಮಾರ ಗರಂ
ನಿನ್ನೆ ರಾತ್ರಿ ಸಿಸಿಬಿ ಪೊಲೀಸ್ರು 5 ಗಂಟೆಗಳ ಅಲಿಖಾನ್ ಮನೆ ಪರಿಶೀಲನೆ ಮಾಡಿ ಕೆಲ ದಾಖಲೆಗಳನ್ನ ಪಡೆದ್ರು. ಅಲ್ಲದೇ ಅಲಿಖಾನ್ ಮನೆ ಮಹಜರ ಮಾಡುತ್ತಿರೋ ವೀಡಿಯೋ ಮೀಡಿಯಾಗಳಿಗೆ ಸಿಕ್ಕಿದೆ. ಈ ವೀಡಿಯೋವನ್ನು ಸಿಸಿಬಿ ಪೊಲೀಸರೇ ಮಾಡಿ, ಲೀಕ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ವಿಡಿಯೋ ಲೀಕ್ ಆಗಿರೋ ಬಗ್ಗೆ ಅಲೋಕ್ ಕುಮಾರ್ ಹಿರಿಯ ಪೊಲಿಸರ ಹಾಗೂ ಮಹಜರು ನಡೆಸಿದ ಸಿಸಿಬಿ ತಂಡದ ಮೀಟಿಂಗ್ ಮಾಡಿದ್ರು. ಜತೆಗೆ ವಿಡೀಯೋ ಲೀಕ್ ಮಾಡಿದವರ ವಿರುದ್ಧ ಹರಿಹಾಯ್ದು, ಅಂತವರನ್ನ ಸಿಸಿಬಿ ತಂಡದಿಂದ ದೂರವಿಡಲು ನಿರ್ಧರಿಸಿದ್ರು. ಇನ್ನು ತಾಜ್ ವೆಸ್ಟೆಂಡ್ ಹೋಟೆಲ್‌ ನನ್ನ ಪರಿಶೀಲನೆ ಮಾಡಿದ್ದೇವೆ , ಹೊಟೇಲ್‌ನಲ್ಲಿ ಸಿಕ್ಕ ಫೋಟೋಗಳ ಬಗ್ಗೆ ತನಿಖೆ ಮಾಡ್ತೀವಿ. ಇದು ಚುನಾವಣೆಗೂ‌ ಮುಂಚಿನ‌ ಪ್ರಕರಣವಾಗಿದ್ದು, ರಾಜಕೀಯ ತಿರುವು ಪಡೆದುಕೊಳ್ಳುತ್ತೆ ಅಂತ ನಾವು ತನಿಖೆ ತೀವ್ರಗತಿಯಲ್ಲಿ‌ಮಾಡಿರ್ಲಿಲ್ಲ. ಸದ್ಯಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳು ನಮಗೆ ಸಿಕ್ಕಿವೆ ಅಂತ ಅಲೋಕ್ ಕುಮಾರ್ ಹೇಳಿದ್ದಾರೆ.

ಆ್ಯಂಬಿಡೆಂಟ್ ಜನರಿಗೆ ಮೋಸ ಮಾಡಿದೆ ಎಂದ ಸಿಎಂ! ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಮುಕ್ತ ಅವಕಾಶ

ರೆಡ್ಡಿ 21 ಕೋಟಿ ಲಂಚ ಪ್ರಕರಣ ಕುರಿತು ಇಂದು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ” ಆ್ಯಂಬಿಡೆಂಟ್ ಕಂಪನಿ ನೂರಾರು ಜನರನ್ನ ಬೀದಿಗೆ ತಳ್ಳಿದೆ. ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಕೇಸಿಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲ್ಲ. ರಾಜ್ಯದ ಜನರ ಹಿತ ಕಾಪಾಡೋ ಹೊಣೆ ನನ್ನ ಮೇಲಿದೆ. ಇಂಥಾ ಪ್ರಕರಣಗಳಲ್ಲಿ ದ್ವೇಷದ ರಾಜಕಾರಣ ಮಾಡಲ್ಲ ಅಂತ ಹೇಳಿದ್ರು.
ಇನ್ನು, ಪ್ರಕರಣ ಪ್ರಮುಖ ಆರೋಪಿ ಫರೀದ್ ನನ್ನು ಸಿಸಿಬಿ ಪೊಲೀಸ್ರು ಕಚೇರಿಗೆ ಕರೆಸಿ, ಸತತ ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿದ್ರು. ಮತ್ತೊಂದು ವಿಷ್ಯ ಅಂದ್ರೆ ರೆಡ್ಡಿ ಪರ ವಕೀಲರು ನಾಳೆ ಮಧ್ಯಂತರ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಇದಲ್ಲದೆ ಸಿಸಿಬಿ ವಿಶೇಷ ಟೀಮ್ ಅಧಿಕಾರಿಗಳು ಹೇಗಾದ್ರು ಮಾಡಿ ಸೋಮವಾರದೊಳಗೆ ರೆಡ್ಡಿಯನ್ನು ಅರೆಸ್ಟ್ ಮಾಡಲೇ ಬೇಕು ಅಂತ ಪಣ ತೊಟ್ಟಿದ್ದಾರೆ.

ಆ್ಯಂಬಿಡೆಂಟ್ ಕಂಪನಿ ಅಂದ್ರೆ ಪೊಲೀಸರಿಗೂ ಭಯ..!

ಫರೀದ್ ಗೆ ರೆಡ್ಡಿ ಮಾತ್ರವಲ್ಲ ದಿನೇಶ್ ಗುಂಡೂರಾವ್,ರಾಮಲಿಂಗ ರೆಡ್ಡಿ ಜೊತೆಯಲ್ಲೂ ನಂಟಿದೆ..! ಇದು ಪವರ್ ಟಿವಿ ಎಕ್ಸ್ ಕ್ಲ್ಯೂಸಿವ್..!

ಆ್ಯಂಬಿಡೆಂಟ್ ಕಂಪನಿ, ರೆಡ್ಡಿ, ಇಡಿ, ಸಿಸಿಬಿಗೂ ಏನು ನಂಟು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..!

ಸಿಸಿಬಿಯಿಂದ ರೆಡ್ಡಿ ಆಪ್ತರು ವಶಕ್ಕೆ..!

ನಂಗೆ ಆ್ಯಂಬಿಡೆಂಟ್ ಕಂಪನಿ ಓನರ್ ಪರಿಚಯವೇ ಇಲ್ಲ – ದಿನೇಶ್ ಗುಂಡೂರಾವ್

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments