ಕಾಶ್ಮೀರದಲ್ಲಿ ಉಗ್ರ ದಮನಕ್ಕೆ ಕೇಂದ್ರ ಸರ್ಕಾರದಿಂದ ಮೊದಲ ಹೆಜ್ಜೆ

0
338

ಶ್ರೀನಗರ : ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇಡೀ ದೇಶ ಎದುರು ನೋಡುತ್ತಿದೆ. ಉಗ್ರ ಸಂಹಾರಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಧ್ವನಿ ಎತ್ತಿವೆ. ಭಾರತ ಕೂಡ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿಯಾಗಿದೆ. ಇನ್ನೇನೇ ಇದ್ದರು ಪಾಕಿಸ್ತಾನ ಮತ್ತು ಅದರಿಂದ ಪೋಷಿಸಲ್ಪಡುತ್ತಿರೋ ಉಗ್ರರಿಗೆ ತಕ್ಕ ಪಾಠ ಕಲಿಸುವುದೊಂದೇ ಬಾಕಿ ಇರೋದು.
ಉಗ್ರ ದಮನಕ್ಕೆ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಪರ್ಮನೆಂಟ್ ಬ್ರೇಕ್ ಹಾಕಲು ಕೇಂದ್ರ ಕಠಿಣ ಕ್ರಮವನ್ನು ಕೈಗೊಂಡಿದೆ. ಐವರು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಕೇಂದ್ರ ಖಡಕ್ ನಿಲುವನ್ನು ತೆಗೆದುಕೊಂಡಿದೆ. ಮೀರವಾಜ್​ ಉಮರ್ ಫಾರೂಕ್, ಸೈಯದ್ ಅಲಿ ಶಾಹ್​, ಹಾಶಿಮ್​ ಖುರೇಶಿ, ಬಿಲಾಲ್​ ಲೊನ್​, ಅಬ್ದುಲ್​ ಗನಿ ಭಟ್​ಗೆ ನೀಡುತ್ತಿದ್ದ ಸರ್ಕಾರಿ ಸೌಲಭ್ಯಗಳನ್ನು ವಾಪಸ್ಸು ಪಡೆಯಲಾಗಿದೆ.
ದೇಶದ ವಿರುದ್ಧ ಕಾಶ್ಮೀರಿ ಯುವಕರನ್ನು ಪ್ರಚೋದಿಸುತ್ತಿರುವ ಆರೋಪ ಈ ಐವರ ಮೇಲಿದೆ. ಇವರು ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧವೇ ಮಾತನಾಡುವ ಆರೋಪವನ್ನೂ ಎದುರಿಸುತ್ತಿದ್ದಾರೆ. ಇದೀಗ ಈ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಪೊಲೀಸ್​ ರಕ್ಷಣೆಯನ್ನು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಹಿಂಪಡೆಯುವ ಮೂಲಕ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಮೊದಲ ಹೆಜ್ಜೆಯನ್ನಿಟ್ಟಿದೆ.

LEAVE A REPLY

Please enter your comment!
Please enter your name here