Saturday, May 21, 2022
Powertv Logo
Homeಸಿನಿಮಾಜೇಮ್ಸ್​​​​ಗೆ ನ್ಯೂ ಟಚ್, ಪವರ್ ಕಂಠದಿಂದ ಅಪ್ಪು ಕಂಬ್ಯಾಕ್

ಜೇಮ್ಸ್​​​​ಗೆ ನ್ಯೂ ಟಚ್, ಪವರ್ ಕಂಠದಿಂದ ಅಪ್ಪು ಕಂಬ್ಯಾಕ್

ಜೋರಾಗಿ ಸಾಗಿದೆ ಕನ್ನಡದ ತೇರು. ಆ ವೈಭವ ನೋಡೋದೇ ನಯನಗಳಿಗೆ ತಂಪು, ಕಿವಿಗಳಿಗೆ ಇಂಪು. ಒಂದ್ಕಡೆ ರಾಕಿಭಾಯ್ ಬಾಕ್ಸ್ ಆಫೀಸ್ ರೂಲ್ ಮಾಡ್ತಿದ್ರೆ, ಮತ್ತೊಂದ್ಕಡೆ ಪವರ್ ಸ್ಟಾರ್ ಪುನೀತ್ ಕಂಬ್ಯಾಕ್ ಮಾಡ್ತಿದ್ದಾರೆ. ಅದೂ ಅದೇ ಪವರ್ ವಾಯ್ಸ್​ನಿಂದ.

ಅಪರಂಜಿಯಂತಹ ಗುಣದ ಸ್ಯಾಂಡಲ್​ವುಡ್​​ನ ದೊಡ್ಮನೆಯ ಅರಸ ಅಪ್ಪು ಅಗಲಿಕೆಯ ನೋವು ಇನ್ನೂ ಅಭಿಮಾನಿಗಳನ್ನು ಕಾಡ್ತಿದೆ. ಆ ದುಃಖ ಎಂದಿಗೂ ಹಾಗೆಯೇ ಇರುತ್ತೆ. ಆದ್ರೆ ಅದನ್ನು ಮರೆಮಾಚಿದ್ದು ಡಾ.ಪುನೀತ್​ ರಾಜ್​ಕುಮಾರ್​ ನಟನೆಯ ಕೊನೆಯ ಸಿನಿಮಾ ಜೇಮ್ಸ್​. ಅಪ್ಪು ಬರ್ತ್​ಡೇಗೆ ಪ್ಯಾನ್​​ ಇಂಡಿಯಾ ಲೆವೆಲ್​ನಲ್ಲಿ ತೆರೆಗಪ್ಪಳಿಸಿದ್ದ ಈ ಚಿತ್ರವನ್ನು ಅಭಿಮಾನಿ ದೇವರುಗಳು ಹಬ್ಬದಂತೆ ಆಚರಿಸಿ ಅದ್ಧೂರಿಯಾಗಿ ಸ್ವಾಗತಿಸಿದ್ರು.

ದೊಡ್ಡ ಪರದೆ ಮೇಲೆ ಅಗಲಿದ ಅಪ್ಪು ಅವ್ರನ್ನು ಜೇಮ್ಸ್​ ಅವತಾರದಲ್ಲಿ ಕಂಡು ಭಾವುಕರಾಗಿಯೇ ಚಿತ್ರವನ್ನು ಕಣ್ತುಂಬಿಕೊಂಡು ಸಂತಸ ಪಟ್ರು. ಪವರ್​ ಸ್ಟಾರ್​​ ಸಿನಿಮಾ ವಿಶ್ವದಾದ್ಯಂತ ಜೇಮ್ಸ್​​ ಸೂಪರ್​ ಹಿಟ್​ ಆಗಿದ್ದಲ್ಲದೆ ಕೇವಲ ನಾಲ್ಕೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿ ಬಾಕ್ಸ್​ ಆಫೀಸ್​​ ಕಲೆಕ್ಷನ್​ನಲ್ಲೂ ಹೊಸ ದಾಖಲೆ ಬರೆಯಿತು. ಇತ್ತೀಚೆಗೆ ಏಪ್ರಿಲ್​​ 14 ರಂದು ಓಟಿಟಿಗೂ ಜೇಮ್ಸ್ ಚಿತ್ರ ಲಗ್ಗೆ ಇಟ್ಟಿದ್ದು ಅಲ್ಲಿಯೂ ಹೆಚ್ಚು ವ್ಯೂವ್ಸ್ ಪಡೆದುಕೊಳ್ತಿದೆ.

ಜೇಮ್ಸ್​ ಸಿನಿಮಾ ಕಂಪ್ಲೀಟ್​ ಆಗೋ ಮೊದಲೇ ಅಪ್ಪು ನಮ್ಮನ್ನು ಬಿಟ್ಟು ಹೋದ ಕಾರಣ ಹೊಸ ತಂತ್ರಜ್ಞಾನದ ಮೂಲಕ ಅಪ್ಪು ಅವ್ರ ಧ್ವನಿಯನ್ನು ರಿಕ್ರಿಯೇಟ್ ಮಾಡಲು ಚಿತ್ರತಂಡ ಪ್ರಯತ್ನಿಸಿತ್ತಾದ್ರೂ ಅದು ಸಾಧ್ಯವಾಗಿರ್ಲಿಲ್ಲ. ಆಗ ಶಿವಣ್ಣ ಡಬ್​ ಮಾಡಿ ಅಪ್ಪು ಪಾತ್ರದ ತೂಕವನ್ನು ಹೆಚ್ಚಿಸಿದ್ರು. ಆದ್ರೂ ಜೇಮ್ಸ್​ ಚಿತ್ರದಲ್ಲಿ ಅಪ್ಪು​​ ರೋಲ್​ಗೆ ಅವ್ರ ಧ್ವನಿ ಇಲ್ಲದೆ ಇದ್ದದ್ದು ಎಲ್ಲಾ ಅಭಿಮಾನಿಗಳಲ್ಲೂ ಬೇಸರ ಮೂಡಿಸಿತ್ತು. ಆ ವಿಚಾರದಲ್ಲಿ ಸದ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ಜೇಮ್ಸ್​ ಸಿನಿಮಾ ತೆರೆಕಂಡು ಸದ್ಯ 25 ದಿನಗಳನ್ನು ಪೂರೈಸಿ ವರ್ಲ್ಡ್​ವೈಡ್​​ ಸುಮಾರು 200 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡೋ ಮೂಲಕ ಎಲ್ಲೆಡೆ ಯಶಸ್ವೀ ಪ್ರದರ್ಶನ ಕಾಣ್ತಿದೆ. ಅಲ್ಲದೆ ಇದೀಗ ಹೊಸ ತಂತ್ರಜ್ಞಾನದ ಮೂಲಕ ಅಪ್ಪು ಪಾತ್ರಕ್ಕೆ ಅವ್ರದ್ದೇ ಧ್ವನಿಯನ್ನು ಅಳವಡಿಸಲಾಗಿದ್ದು, ಡಾ.ರಾಜ್​ಕುಮಾರ್​​ ಹುಟ್ಟುಹಬ್ಬದ ವಿಶೇಷತೆಯಲ್ಲಿ ಏಪ್ರಿಲ್​ 22ರಂದು ಜೇಮ್ಸ್​ ಚಿತ್ರವನ್ನು ರೀರಿಲೀಸ್​ ಮಾಡಲು ಚಿತ್ರತಂಡ ರೆಡಿಯಾಗಿದೆ. ಸುದ್ದಿಗೋಷ್ಟಿ ಮೂಲಕ ಚಿತ್ರತಂಡ ಈ ವಿಚಾರವನ್ನು ಸ್ಪಷ್ಟಪಡಿಸಿದೆ.

ಟಾಲಿವುಡ್​​ ಇಂಡಸ್ಟ್ರಿಯಲ್ಲಿ ಕಳೆದ 25 ವರ್ಷಗಳಿಂದ ಕೆಲಸ ಮಾಡಿರೋ ಹೈದರಾಬಾದ್​ನ ಪಪ್ಪು ಅಲಿಯಾಸ್​​ ಶ್ರಿನಿವಾಸ್​​ ರಾವ್​ ಸೌಂಡ್​ ಇಂಜಿನಿಯರ್​ ತಂಡ ಹೆಚ್ಚು ಹಾರ್ಡ್​ವರ್ಕ್​ ಮಾಡಿ ಜೇಮ್ಸ್​ ಸಿನಿಮಾದಲ್ಲಿ ಅಪ್ಪು ಪಾತ್ರಕ್ಕೆ ಅವ್ರ ಒರಿಜಿನಲ್​ ಧ್ವನಿಯನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವದಲ್ಲೇ ಮೊದಲ ಬಾರಿಗೆ ವಾಯ್ಸ್​ ರೀಕ್ರಿಯೇಶನ್​ ಮಾಡಿರೋ ಸಿನಿಮಾ ನಮ್ಮ ಕನ್ನಡದ ಜೇಮ್ಸ್​ ಚಿತ್ರ ಅನ್ನೋದು ನಿಜಕ್ಕೂ ಹೆಮ್ಮೆಯ ವಿಚಾರ.

ಇನ್ನೂ ಏಪ್ರಿಲ್​ 22ಕ್ಕೆ ಅಪ್ಪು ಧ್ವನಿಯೊಂದಿಗೆ ಜೇಮ್ಸ್​ ಚಿತ್ರ ಈಗಿರುವ ಚಿತ್ರಮಂದಿಗಳ ಜೊತೆಗೆ ಇನ್ನೂ 125ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಕನ್ನಡ ವರ್ಷನ್​ ಜೇಮ್ಸ್​ ಮರುಬಿಡುಗಡೆಯಾಗಲಿದೆ. ಒಟ್ಟಾರೆ ಪುನೀತ್​ ರಾಜ್​ಕುಮಾರ್​ ಪವರ್​​ಫುಲ್​ ವಾಯ್ಸ್​ನಲ್ಲಿ ಮತ್ತೆ ಥಿಯೇಟರ್​ಗಳಲ್ಲಿ ಅಭಿಮಾನಿಗಳಿಗೆ ಜೇಮ್ಸ್​ ದರ್ಶನ ಸಿಗಲಿದೆ. ಈ ವಿಚಾರ ಸದ್ಯ ಇಡೀ ಅಪ್ಪು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.  ​​

ಚಂದನ.ಎಸ್​, ಫಿಲ್ಮ್​ ಬ್ಯೂರೋ, ಪವರ್​ ಟಿವಿ

- Advertisment -

Most Popular

Recent Comments