HomeP.Cricketಇಂಟರ್ ನ್ಯಾಷನಲ್ಟೆಸ್ಟ್​ ಕ್ರಿಕೆಟ್​ನಲ್ಲಿ ಯಾವ ವೇಗಿಯೂ ಸಾಧಿಸದ್ದನ್ನು ಸಾಧಿಸಿದ ಆ್ಯಂಡರ್ಸನ್..!

ಟೆಸ್ಟ್​ ಕ್ರಿಕೆಟ್​ನಲ್ಲಿ ಯಾವ ವೇಗಿಯೂ ಸಾಧಿಸದ್ದನ್ನು ಸಾಧಿಸಿದ ಆ್ಯಂಡರ್ಸನ್..!

ಸೌತಾಂಪ್ಟನ್ :  ಪಾಕಿಸ್ತಾನ ತಂಡದ ನಾಯಕ ಅಜರ್ ಅಲಿ ವಿಕೆಟ್ ಉರುಳಿಸುವ ಮೂಲಕ ಇಂಗ್ಲೆಂಡ್​​ ವೇಗಿ ಜೇಮ್ಸ್​ ಆ್ಯಂಡರ್ಸನ್​​ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಸಾಧನೆಯನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾವ ಫಾಸ್ಟ್ ಬೌಲರ್  ಮಾಡಿರಲಿಲ್ಲ.

ಹೌದು, ಪಾಕಿಸ್ತಾನ ವಿರುದ್ಧದ ಮೂರು ಟೆಸ್ಟ್​ ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಕೊನೆಯ ದಿನ ಆ್ಯಂಡರ್ಸನ್ ಈ ದಾಖಲೆ ಬರೆದರು. 38 ವರ್ಷದ ಆ್ಯಂಡರ್ಸನ್ 156 ಟೆಸ್ಟ್​ ಪಂದ್ಯಗಳಿಂದ, 291 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿ ಈ  ದಾಖಲೆ ಬರೆದಿದ್ದಾರೆ.

ಟೆಸ್ಟ್​​​​​​​​ನಲ್ಲಿ 600 ವಿಕೆಟ್ ಪಡೆದ ವಿಶ್ವದ ಮೊದಲ ಫಾಸ್ಟ್ ಬೌಲರ್ ಹಾಗೂ 4ನೇ ಬೌಲರ್ ಎಂಬ ಹೆಗ್ಗಳಿಕೆಗೆ ಆ್ಯಂಡರ್ಸನ್ ಪಾತ್ರರಾಗಿದ್ದಾರೆ. ಸ್ಪಿನ್ನರ್ ಗಳಾದ ಶ್ರೀಲಂಕಾದ ಮುತ್ತಯ್ಯ ಮುರುಳಿಧರನ್ (800), ಆಸ್ಟ್ರೇಲಿಯಾದ ಶೇನ್​ವಾರ್ನ್ (708), ಭಾರತದ ಅನಿಲ್ ಕುಂಬ್ಳೆ (619) ಮೊದಲ ಮೂರು ಸ್ಥಾನದಲ್ಲಿದ್ದಾರೆ.  ವೇಗದ ಬೌಲರ್​ಗಳಲ್ಲಿ ಆ್ಯಂಡರ್ಸನ್ನೇ ಮೊದಲಿಗರು..!

ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿದೆ. 1-0 ಅಂತರದಲ್ಲಿ ಇಂಗ್ಲೆಂಡ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments