Home ಪವರ್ ಪಾಲಿಟಿಕ್ಸ್  'ಸುಳ್ಳು ದಾಖಲೆ ಸೃಷ್ಟಿಸಿದ ವ್ಯಕ್ತಿಗೆ ಜೈ ಎಂದ ಚುನಾವಣಾ ಅಧಿಕಾರಿಗಳು'..!

 ‘ಸುಳ್ಳು ದಾಖಲೆ ಸೃಷ್ಟಿಸಿದ ವ್ಯಕ್ತಿಗೆ ಜೈ ಎಂದ ಚುನಾವಣಾ ಅಧಿಕಾರಿಗಳು’..!

ಕೊಪ್ಪಳ: ಗ್ರಾಮ‌ ಪಂಚಾಯತ್ ಚುನಾವಣೆಯಲ್ಲಿ ಮೀಸಲಾತಿ ಇರುವ ವಾರ್ಡ್ ಗಳಿಗೆ ಸ್ಪರ್ಧಿಸಲು ಸರ್ಕಾರ ಸಾಕಷ್ಟು ನಿಯಮಗಳನ್ನು ತಂದಿದೆ. ಆದರೆ ರಾಜಕಾರಣಿಗಳ ಒತ್ತಡ‌ ಮತ್ತು ಅಧಿಕಾರಿಗಳ ಎಡವಟ್ಟಿನಿಂದ ಗ್ರಾಮ ಪಂಚಾಯತ್ ಚುನಾವಣೆಯೂ ಉದ್ವಿಗ್ನ ಸ್ಥಿತಿಗೆ ಕಾರಣವಾಗುತ್ತಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಪಕ್ಷಗಳು ಇಲ್ಲದಿದ್ದರೂ ರಾಜಕಾರಣಿಗಳು ಪರೋಕ್ಷವಾಗಿ ತಮ್ಮ ಕಾರ್ಯಕರ್ತರಿಗೆ ಬೆಂಬಲಿಸುವ ಭರದಲ್ಲಿ ಚುನಾವಣೆ ನಿಯಮ ಉಲ್ಲಂಘನೆ ಮಾಡಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಗ್ರಾಮದಲ್ಲಿ ಉದ್ವಿಗ್ನ ಪರಸ್ಥಿತಿ ಉಂಟಾಗಲು ಕಾರಣಕರ್ತರಾಗುತ್ತಿದ್ದಾರೆ.

ಇಂದು ಗ್ರಾಮ‌ ಪಂಚಾಯತಿ ಚುನಾವಣೆಯ ಎರಡನೇ ಹಂತದ ನಾಮಪತ್ರ ಸಲ್ಲಿಸುವಿಕೆಯ ಹಿಂಪಡೆಯಲು ಕೊನೆ ದಿನವಾಗಿದೆ. ಈ ಹಿಂದೆ 16 ನೇ ತಾರಿಕೆಗೆ ನಾಮಪತ್ರ ಸಲ್ಲಿದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಿ ಸರಿಯಾದ ದಾಖಲೆ ಸಲ್ಲಿಸಿದ್ದ ವ್ಯಕ್ತಿಗಳನ್ನು ಪಂಚಾಯತ್ ಚುನಾವಣೆಗೆ ಅಭ್ಯರ್ಥಿಗಳನ್ನು  ಘೋಷಣೆ ಮಾಡಲಾಗಿತ್ತು. ಆದರೆ ಕೊಪ್ಪಳದ ಗಂಗಾವತಿ ತಾಲೂಕಿನ ಎರಡು ಗ್ರಾಮ ಪಂಚಾಯತ್ ಅಲ್ಲಿ ಒಂದೇ ಪ್ರಕರಣಗಳು ಎರಡು ರೀತಿಯ ವಿಭಿನ್ನ ನಿರ್ಧಾರಗಳಿಗೆ ಕಾರಣವಾಗಿದೆ.

ಗಂಗಾವತಿಯ ಕೇಸರಹಟ್ಟಿ ಗ್ರಾ.ಪಂ. ಮತ್ತು ಜಂಗಮರ ಕಲ್ಗುಡಿ ಗ್ರಾ.ಪಂಚಾಯತಿಯಲ್ಲಿ ಆಸ್ತಿ ಪ್ರಮಾಣ ಪತ್ರದಲ್ಲಿ ಲೋಪದೋಷಗಳು ಉಂಟಾಗಿ ಒಬ್ಬರ ನಾಮಪತ್ರ ತಿರಸ್ಕೃತ ಇನ್ನೊಬ್ಬರ ನಾಮಪತ್ರ ಸ್ವೀಕೃತವಾಗಿದೆ. ಇದರಲ್ಲಿ ರಾಜಕೀಯ ಪ್ರವೇಶ ಆಗಿದೆ. ಗಂಗಾವತಿ ತಹಶಿಲ್ದಾರ್ ಎ.ರೇಣುಕಾ ಮತ್ತು ಆರ್.ಐ ಹನುಮಂತಪ್ಪ ಅವರು ರಾಜಕೀಯ ಒತ್ತಡದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸುಳ್ಳು ದಾಖಲೆ ಸೃಷ್ಟಿಸಿದರು.  ಅವರನ್ನು ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿದ ವ್ಯಕ್ತಿಯ ಪೂರಕ ದಾಖಲೆಗಳನ್ನು ತಹಶಿಲ್ದಾರ್ ಗೆ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಬೇಜವಬ್ದಾರಿತನ‌ ಮೇರೆದಿದ್ದಾರೆ ಎಂದು  ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನೀದು ಆರೋಪ: ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮ‌ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮರಕುಂಬಿ ಗ್ರಾಮದಲ್ಲಿ ಬಿಸಿಎಮ್ “ಬಿ” ಗೆ ಚನ್ನವಿರಯ್ಯ ಮತ್ತು ಜಗದೀಶಪ್ಪ ಎಂಬ ಇಬ್ಬರು ವ್ಯಕ್ತಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ಇದರಲ್ಲಿ ಜಗದೀಶಪ್ಪ ಎಂಬುವವರು ನಿವೃತ್ತ ಸರಕಾರಿ ನೌಕರರಾಗಿದ್ದು, ಜೊತೆಗೆ 15 ಕ್ಕೂ ಹೆಚ್ಚು ಎಕ್ಕರೆ ಕೃಷಿಯನ್ನು ಭೂಮಿಯನ್ನು ಹೊಂದಿದವರಾಗಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ನಿಯಮದ ಪ್ರಕಾರ ಬಿಸಿಎಮ್. “ಬಿ” ಗೆ ಸ್ಪರ್ಧಿಸುವ ವ್ಯಕ್ತಿಗಳು ಆದಾಯ ತೆರಿಗೆದಾರರು ಹಾಗೂ ದೊಡ್ಡ ಕೃಷಿಕರಾಗಿರಬಾರದು ಎಂಬ‌ ನಿಯಮವಿದೆ. ಆದರೆ ಜಗದೀಶಪ್ಪ ನಾಮಪತ್ರ ಸಲ್ಲಿಸುವ ವೇಳೆ ಸುಳ್ಳು ದಾಖಲೆ ನೀಡಿ ಅಧಿಕಾರಿಗಳ ಕಣ್ಣಿಗೆ ಮಣ್ಣು ಎರಚಿದ್ದಾನೆ. ಈ ಕೂಡಲೇ ಅಧಿಕಾರಿಗಳು ಸುಳ್ಳು ದಾಖಲೆ ನೀಡಿದ ವ್ಯಕ್ತಿಯ ನಾಮಪತ್ರವನ್ನು ತಿರಸ್ಕೃತಗೊಳಿಸಿ ಉಲ್ಲಂಘನೆ ಆಗಿರುವ ನಿಯಮವನ್ನು ಸರಿಪಡಿಸಬೇಕಾಗಿ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

ಒಂದೇ ತರಹ ಪ್ರಕರಣ ಎರಡು ರೀತಿಯ ನಿರ್ಧಾರ.  ಮರಕುಂಬಿಯಲ್ಲಿ ನೆಡದ ಪ್ರಕರಣದಂತೆಯೇ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ವಿ.ಪ್ರಸಾದ್ ಎಂಬುವವರು ನಾಮಪತ್ರ ಸಲ್ಲಿಸಿದ್ದರು.  ಅಲ್ಲಿಯೂ ಆರ್.ಐ. ಹನುಮಂತಪ್ಪ ಕಾರ್ಯನಿರ್ವಹಿಸುತಿದ್ದಾರೆ. ವಿ.ಪ್ರಸಾದ್ ಅವರು ತೆರಿಗೆದಾರರು ಹಾಗೂ ದೊಡ್ಡ ಕೃಷಿಕರು ಎಂಬ ಕಾರಣಕ್ಕೆ ನಾಮಪತ್ರವನ್ನು ತಿರಸ್ಕೃತಗೊಳಿಸಿದ್ದಾರೆ. ಅಂತಹುದೇ ಪ್ರಕರಣದಲ್ಲಿ ಮರಕುಂಬಿಯ ಜಗದೀಶಪ್ಪ ದೊಡ್ಡ ಕೃಷಿಕರು ಜೊತೆಗೆ‌ ನಿವೃತ್ತ ಸರ್ಕಾರಿ‌ ನೌಕರರಾಗಿದ್ದರೂ ಅವರ ನಾಮಪತ್ರವನ್ನು ಸ್ವೀಕೃತಗೊಳಿಸಲಾಗಿದೆ.

ಗ್ರಾ.ಪಂ.ಚುನಾವಣೆಯಲ್ಲಿ ರಾಜಕೀಯ ಪ್ರವೇಶ. ಹೌದು ಇದರಲ್ಲಿ ರಾಜಕೀಯ ಪ್ರವೇಶವಾಗಿದೆ ಎಂದು ಅಭ್ಯರ್ಥಿಗಳ ನೇರ ಆರೋಪ ಮಾಡುತ್ತಿದ್ದಾರೆ. ತಹಶಿಲ್ದಾರ್ ಮತ್ತು ಆರ್.ಐ ವರ್ತನೆಯೇ ಇದಕ್ಕೆ ಸಾಕ್ಷಿಯಾಗಿದೆ. ಆಸ್ತಿ ಪ್ರಮಾಣ ಪತ್ರ ಲೋಪದೊಷವಿದ್ದ ಕಾರಣಕ್ಕೆ ಜಂಗಮರ ಕಲ್ಗುಡಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಳಿಸಲಾಗಿದೆ. ಆದರೆ ಮರಕುಂಬಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಆಸ್ತಿ ಪ್ರಮಾಣ ಪತ್ರದಲ್ಲಿಯೂ ಲೋಪದೋಷವಿದೆ.  ಆದರೆ ಇಲ್ಲಿ ಜಗದೀಶಪ್ಪ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬ ಕಾರಣಕ್ಕೆ ಆತನ‌ ನಾಮಪತ್ರವನ್ನು ಸ್ವೀಕೃತ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಮರಕುಂಬಿ ಗ್ರಾಮ‌ ಪಂಚಾಯತ್ ಚುನಾವಣೆ ವೇಳೆ ಬಿಸಿಎಮ್.”ಬಿ” ಗೆ ಸುಳ್ಳು ದಾಖಲೆ ಸೃಷ್ಟಿಸಿದ ವ್ಯಕ್ತಿಯ ಪ್ರಮಾಣ ಪತ್ರ ರದ್ದು ಮಾಡಿ ನ್ಯಾಯ ಒದಗಿಸಬೇಕೆಂದು ಮರಕುಂಬಿ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಕೃಷಿ ಕಾಯ್ದೆಯನ್ನು ರದ್ದು ಮಾಡುವುದಿಲ್ಲ: ನರೇಂದ್ರ ಸಿಂಗ್ ತೋಮರ್

ದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಒಂದೂವರೆ ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರೊಟೆಸ್ಟ್ ನಡೆಸುತ್ತಿವೆ. ಇದರ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ದೇಶದ ಹೆಚ್ಚಿನ ರೈತರು...

‘ನಾಳೆ ಸಿಎಂ ಯಡಿಯೂರಪ್ಪ ಉಡುಪಿ ಪ್ರವಾಸ’

ಬೆಂಗಳೂರು: ನಾಳೆ ನಾಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಉಡುಪಿ ಪ್ರವಾಸ ಮಾಡಲಿದ್ದಾರೆ. ನಾಳೆ ಸಂಜೆ ಮಧ್ಯಾಹ್ನ 3 ಗಂಟೆಗೆ ಹೆಚ್ ಎ ಎಲ್ ನಿಂದ ಪ್ರಯಾಣ ಬೆಳೆಸಿ, ಸಂಜೆ 5 ಗಂಟೆಗೆ ಪರ್ಯಾಯ...

‘ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ’

ಬೆಂಗಳೂರು: ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದ್ದು,  ನಾಳೆಯಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ  ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಈ ವಿಷಯ ಪ್ರಕಟಿಸಿದೆ. ಇನ್ನೂ...

‘ರೈತರ ಹೋರಾಟ ಬೆಂಬಲಿಸಿ ರಾಜಭವನ ಮುತ್ತಿಗೆ ಹಾಕಲು ಕೈ ರಣತಂತ್ರ’​

ಬೆಂಗಳೂರು: ರೈತರ ಹೋರಾಟಕ್ಕೆ ಬೆಂಬಲ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನವರಿ 20 ರಂದು ಬೆಂಗಳೂರು ಸ್ತಬ್ಧ ಮಾಡುಲು ಪ್ಲಾನ್ ಮಾಡಿಕೊಂಡಿದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 20 ರಂದು...

Recent Comments