Home ಸಿನಿ ಪವರ್ ಜಗ್ಗೇಶ್ ಹೊಸ ಸಿನಿಮಾಕ್ಕೆ ಸುನೀಲ್​ ಕುಮಾರ್ ದೇಸಾಯಿ ಆ್ಯಕ್ಷನ್​ ಕಟ್​..!

ಜಗ್ಗೇಶ್ ಹೊಸ ಸಿನಿಮಾಕ್ಕೆ ಸುನೀಲ್​ ಕುಮಾರ್ ದೇಸಾಯಿ ಆ್ಯಕ್ಷನ್​ ಕಟ್​..!

ನವರಸ ನಾಯಕ ಜಗ್ಗೇಶ್,  ಮೂರ್ನಾಲ್ಕು ದಶಕಗಳಿಂದ ಕನ್ನಡಿಗರನ್ನು ಹಾಸ್ಯದ ಕಡಲಲ್ಲಿ ತೇಲಿಸ್ತಾ ಬಂದಿರುವ ಕಾಮಿಡಿ ಕಿಂಗ್​. ಹಾಗೆಯೇ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ಸಸ್ಪೆನ್ಸ್, ಥ್ರಿಲ್ಲರ್ ಮೂವಿಗಳಿಂದ ಕನ್ನಡಿಗರನ್ನು ಸೆಳೆದವರು. ಜಗ್ಗೇಶ್  ಮತ್ತು ಸುನೀಲ್ ಕುಮಾರ್ ಸಿನಿ ವಿಚಾರದಲ್ಲಿ ತದ್ವಿರುದ್ದ..! ಆದ್ರೆ, ಈಗ ಇವರಿಬ್ಬರು ಒಟ್ಟಾಗಿ ಒಂದು ಸಿನಿಮಾ ಮಾಡೋ ಪ್ಲಾನ್​ನಲ್ಲಿದ್ದಾರೆ.

ಜಗ್ಗೇಶ್ ಮತ್ತು ಸುನೀಲ್ ಕುಮಾರ್ ದೇಸಾಯಿ ಹೆಚ್ಚು-ಕಮ್ಮಿ ಒಟ್ಟೊಟ್ಟಿಗೆ ಸಿನಿರಂಗಕ್ಕೆ ಎಂಟ್ರಿಕೊಟ್ಟವರು. ಜಗ್ಗೇಶ್ ನಟನೆಯಲ್ಲಿ ತೊಡಗಿಸಿಕೊಂಡ್ರು. ಸುನೀಲ್​ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ರು.  ಇಬ್ಬರೂ ಒಟ್ಟಿಗೆ ಸಿನಿಪಯಣ ಆರಂಭಿಸಿದ್ದರೂ ಇಲ್ಲಿಯವರೆಗೆ ಇಬ್ಬರು ಒಟ್ಟಾಗಿ ಸಿನಿಮಾ ಮಾಡಿಲ್ಲ. ಈಗ ಆ ಕಾಲ ಕೂಡಿ ಬರಲಿದೆ.

ಹೌದು. ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ‘ರಂಗನಾಯಕ’ ಪ್ರೆಸ್​ಮೀಟ್​ನಲ್ಲಿ ಇಂಥದ್ದೊಂದು ಸುದ್ದಿ ಸಿಕ್ಕಿದೆ. ಸ್ವತಃ ಜಗ್ಗೇಶ್ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.  ಪ್ರೆಸ್​ಮೀಟ್​ನಲ್ಲಿದ್ದ ಸುನೀಲ್​ ಕುಮಾರ್ ದೇಸಾಯಿಯವರನ್ನು ನೋಡಿ ಮಾತನಾಡಿದ ನವರಸನಾಯಕ ಜಗ್ಗೇಶ್  ನೀವು ಬರೀ ರಮೇಶ್​ ಅವರನ್ನೇ ಹಾಕಿಕೊಂಡು ರುಬ್ಬೋದಾಯ್ತು… ನಾವು ಇಲ್ಲೇ 38 ವರ್ಷಗಳಿಂದ ಇದ್ದೀವಿ. ನಮಗೂ ಒಂದು ಚಾನ್ಸ್​ ಕೊಡಿ  ಅಂತಾ ತಮ್ಮದೇ ಕಾಮಿಡಿ ಸ್ಟೈಲ್​ನಲ್ಲಿ ಹೇಳಿದ್ರು.

ಜಗ್ಗೇಶ್ ಮಾತಿಗೆ ಸುನೀಲ್ ಕುಮಾರ್ ದೇಸಾಯಿ, ಸಿನಿಮಾ ಮಾಡೋಣ ಬಿಡಿ ಅನ್ನೋ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಜಗ್ಗೇಶ್- ಸುನೀಲ್ ಕುಮಾರ್ ಕಾಂಬಿನೇಷನ್​ನ ಮೂವಿ ಮೇಲೆ ನಿರೀಕ್ಷೆ, ಕುತೂಹಲ ಜಾಸ್ತಿಯಾಗಿದೆ. ಗಾಂಧಿನಗರದಲ್ಲಿ ಸದ್ಯ ಈ ಸ್ವೀಟ್​ ನ್ಯೂಸ್​ನದ್ದೇ ಚರ್ಚೆ.

ಸದ್ಯ ಜಗ್ಗೇಶ್​ ‘ ರಂಗನಾಯಕ’  ಸಿನಿಮಾ ಬ್ಯುಸಿಯಲ್ಲಿದ್ದಾರೆ. ಮಠ, ಎದ್ದೇಳು ಮಂಜುನಾಥ ಸಿನಿಮಾ ನಂತ್ರ ಜಗ್ಗೇಶ್ ಮತ್ತು ಡೈರೆಕ್ಟರ್ ಗುರುಪ್ರಸಾದ್ ಕಾಂಬಿನೇಷನ್​ನಲ್ಲಿ ಬರ್ತಿರೋ ರಂಗನಾಯಕ ಈಗಾಗಲೇ ಸಖತ್ ಸದ್ದು ಮಾಡ್ತಿದೆ. ಟೀಸರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ‘ರಂಗನಾಯಕ’ ಅಬ್ಬರಿಸುತ್ತಿದ್ದಾನೆ. ರಂಗನಾಯಕನ ಬಳಿಕ ಸುನೀಲ್ ಕುಮಾರ್ ದೇಸಾಯಿ ಮತ್ತು ಜಗ್ಗೇಶ್ ಕಾಂಬಿನೇಷನ್​ನ ಹೊಸ ಮೂವಿ ಸೆಟ್ಟೇರೋ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments