ಸಾಲ್ಟ್ ಅಂಡ್ ಪೆಪ್ಪರ್ ಲುಕ್ನಲ್ಲಿ ಸೌತ್ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು ಅಂಥದ್ದೇನು ಸಾಹಸ ಮಾಡಿದ್ದಾರೆ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಕಲೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ. ಅದನ್ನ ಆರಾಧಿಸೋನಿಗೆ ಆ ಸರಸ್ವತಿ ಒಲಿದೇ ಒಲಿಯುತ್ತಾಳೆ ಅನ್ನೋದಕ್ಕೆ ಟಾಲಿವುಡ್ನ ಸ್ಟಾರ್ ನಟ ಜಗಪತಿ ಬಾಬು ಬೆಸ್ಟ್ ಎಕ್ಸಾಂಪಲ್. ಸಿನಿಮಾ ಮೇಲೆ ಪ್ರೀತಿ, ಗೌರವದ ಜೊತೆ ಪ್ಯಾಷನ್ ಇರೋರಿಗೆ ಒಳ್ಳೊಳ್ಳೆ ಪಾತ್ರಗಳು ಹಾಗೂ ಸಿನಿಮಾಗಳು ಮನೆ ಬಾಗಿಲಿಗೆ ಹುಡುಕಿ ಬರುತ್ತವೆ ಅನ್ನೋದು ಹಂಡ್ರೆಡ್ ಪರ್ಸೆಂಟ್ ನಿಜ.
ಬಾಲನಟನಾಗಿಯೇ ಬಣ್ಣ ಹಚ್ಚಿದ್ದ ಜಗಪತಿ ಬಾಬು, 90ರ ದಶಕದಿಂದ ಬರೋಬ್ಬರಿ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟನಾಗಿ, ಸಹನಟನಾಗಿ ನೂರಾರು ಸಿನಿಮಾಗಳಲ್ಲಿ ಕಮಾಲ್ ಮಾಡಿರೋ ಜಗಪತಿ ಬಾಬು, ಬಾಲಕೃಷ್ಣ ಸಿನಿಮಾ ಮೂಲಕ ಖಡಕ್ ಖಳನಟನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ರು.
ಲೆಜೆಂಡ್ ಸಿನಿಮಾದಲ್ಲಿ ಸಾಲ್ಟ್ ಅಂಡ್ ಪೆಪ್ಪರ್ ಲುಕ್ನಲ್ಲಿ ಗಮನ ಸೆಳೆದ ಬಾಬು, ಅದಾದ ಬಳಿಕ ಅಂತಹದ್ದೇ ಪಾತ್ರಗಳಿಗೆ ಡಿಮ್ಯಾಂಡ್ ಹೆಚ್ಚಿಸಿಕೊಂಡರು. ಬ್ರ್ಯಾಂಡ್ ಕೂಡ ಆಗಿಬಿಟ್ರು. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ಗಳ ಎದುರು ವಿಲನ್ ಖದರ್ ತೋರಿದ್ರು ಜಗಪತಿ ಬಾಬು.
ನಮ್ಮ ಕನ್ನಡಕ್ಕೂ ಹೊಸಬರೇನಲ್ಲ ಈ ಟಾಲಿವುಡ್ ಸ್ಟಾರ್ ನಟ. ಹೌದು.. ಸುದೀಪ್ರ ಬಚ್ಚನ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದ ಬಾಬು, ಅದಾದ ಬಳಿಕ ನಿಖಿಲ್ ಕುಮಾರ್ ಚೊಚ್ಚಲ ಚಿತ್ರ ಜಾಗ್ವಾರ್ನಲ್ಲಿ ಬಣ್ಣ ಹಚ್ಚಿದ್ದರು.
ಮೂಲತಃ ಆಂಧ್ರದವರಾದ್ದರಿಂದ ಕನ್ನಡ ಭಾಷೆಯ ಮೇಲೆ ಅವರಿಗೆ ಅಷ್ಟೇನು ಹಿಡಿತವಿರಲಿಲ್ಲ. ನಟನೆಯಲ್ಲೇ ಎಷ್ಟೇ ನೈಜತೆ ನೀಡಿದ್ರೂ ತಮ್ಮ ಪಾತ್ರಕ್ಕೆ ತಾವೇ ವಾಯ್ಸ್ ಡಬ್ ಮಾಡಲಾಗುತ್ತಿರಲಿಲ್ಲ. ಲಿಪ್ ಸಿಂಕ್ ಆಗದಿದ್ದಾಗ ಸಿನಿಮಾನ ದೊಡ್ಡ ಪರದೆ ಮೇಲೆ ನೋಡಿದ್ರೆ ನಿರೀಕ್ಷಿತ ಮಟ್ಟದಲ್ಲಿ ಕಿಕ್ ಸಿಗುತ್ತಿರಲಿಲ್ಲ.
ಆದ್ರೀಗ, ಇದೇ ಮೊದಲ ಬಾರಿ ಜಗಪತಿ ಬಾಬು ಕನ್ನಡ ಸಿನಿಮಾವೊಂದರ ಪಾತ್ರಕ್ಕಾಗಿ ಖುದ್ದು ಅವರೇ ವಾಯ್ಸ್ ಡಬ್ ಮಾಡಿದ್ದಾರೆ.
ಯೆಸ್.. ಕನ್ನಡದ ಮೋಸ್ಟ್ ಎಕ್ಸ್ಪೆಕ್ಟೆಡ್ ರಾಬರ್ಟ್ ಸಿನಿಮಾದಲ್ಲಿ ಖಳನಾಯಕನ ಪಾತ್ರ ನಿಭಾಯಿಸಿರೋ ಬಾಬು, ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿರೋದು ವಿಶೇಷ. ಈ ಮೂಲಕ ಜಗಪತಿ ಬಾಬು ತಮ್ಮ ಸಿನಿಕರಿಯರ್ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.
ದರ್ಶನ್ ಜೊತೆ ನಟಿಸಿದ ನಂತ್ರ, ಅವ್ರ ಸ್ನೇಹ ಯಾರಿಗೆ ತಾನೆ ಇಷ್ಟವಾಗಲ್ಲ ನೀವೇ ಹೇಳಿ. ಅದ್ರಲ್ಲೂ ಪ್ರೀತಿ ಹಂಚೋ ಯಜಮಾನನ ಸರಳ ಸಜ್ಜನಿಕೆಗೆ ಫಿದಾ ಆಗಿರೋ ಬಾಬು, ಅವ್ರೊಂದಿಗೆ ಸೆಟ್ನಲ್ಲಿ ಕನ್ನಡ ಕಲಿಯೋಕ್ಕೆ ಮುಂದಾಗಿದ್ರು. ಇದಕ್ಕೆ ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೂಡ ಸಾಥ್ ಕೊಟ್ಟಿದ್ದರು.
ಚಿತ್ರತಂಡದ ಜೊತೆ ತುಂಬಾ ಚೆನ್ನಾಗಿ ಜೆಲ್ ಆಗ್ತಿದ್ದ ಜಗಪತಿ ಬಾಬು, ಜಾಗ್ವಾರ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಂಡ್ಯದಲ್ಲಿ ಆದಷ್ಟು ಬೇಗ ಕನ್ನಡ ಕಲಿಯೋ ಭರವಸೆ ನೀಡಿದ್ದರು. ಅದ್ರಂತೆ ಈಗ ಡಿ ಬಾಸ್ ದರ್ಶನ್ ಜೊತೆ ಕನ್ನಡ ಕಲಿತಿದ್ದಾರೆ. ತಾವೇ ತಮ್ಮ ಪಾತ್ರಕ್ಕೆ ವಾಯ್ಸ್ ಡಬ್ ಮಾಡೋದಾಗಿ ಹೇಳಿದ್ದಲ್ಲದೆ, ಹೈದ್ರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.
ಜಗಪತಿ ಬಾಬು ಮೊದಲ ಬಾರಿ ಕನ್ನಡ ಸಿನಿಮಾಗೆ ಹಿನ್ನೆಲೆ ಧ್ವನಿ ನೀಡಿರೋ ವಿಚಾರ ಖುಷಿ ವ್ಯಕ್ತಪಡಿಸಿರೋ ನಿರ್ದೇಶಕ ತರುಣ್, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.
ಖ್ಯಾತ ಬಹುಭಾಷಾ ನಟ ಜಗಪತಿ ಬಾಬು ಸರ್, ತಾವು ನಟಿಸಿದ ಕನ್ನಡದ ರಾಬರ್ಟ್ ಚಿತ್ರಕ್ಕೆ ಮೊದಲನೇ ಸಲ ಸ್ವತಃ ತಾವೇ ಧ್ವನಿ ನೀಡಿ,ಮತ್ತೊಮ್ಮೆ ತಮ್ಮ ವೃತ್ತಿಜೀವನದ ಹಿರಿಮೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಂತಹ ಅದ್ಭುತ ನಟನ ಜೊತೆ ಕೆಲಸ ಮಾಡಿರೋದು ನನ್ನ ವೃತ್ತಿ ಜೀವನದ ಹಿರಿಮೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವೆ. ನಿಮಗೆ ನಮ್ಮ ಚಿತ್ರ ತಂಡದಿಂದ ತುಂಬು ಹೃದಯದ ಧನ್ಯವಾದಗಳು ಸರ್ ಎಂದಿದ್ದಾರೆ ಡೈರೆಕ್ಟರ್ ತರುಣ್ ಸುಧೀರ್.
ಅಲ್ಲಿಗೆ ರಾಬರ್ಟ್ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಮುಗಿದಿದ್ದು, ದರ್ಶನ್ ಆಜ್ಞೆ ಆಗ್ತಿದ್ದಂತೆ ಥಿಯೇಟರ್ ಅಂಗಳದಲ್ಲಿ ರಂಗೇರಲಿದೆ. ಕೊರೋನೇತರ ರಿಲೀಸ್ ಆಗ್ತಿರೋ ಬಿಗ್ ಸ್ಟಾರ್ ಬಿಗ್ ಮೂವಿ ಇದಾಗಲಿದ್ದು, ಬಾಕ್ಸ್ ಆಫೀಸ್ನಲ್ಲಿ ಹೇಗೆಲ್ಲಾ ಧೂಳೆಬ್ಬಿಸುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್