ಕೋಲಾರ: ಬೆಳಗಾವಿಯಲ್ಲಿ ಶಾಂತಿ ವಾತಾವರಣ ಕದಡಿಲ್ಲ ಅಂತ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ರು. ಕೋಲಾರದ ಕೆಜಿಎಫ್ ನ ಬಿಜಿಎಂಎಲ್ ಗೆ ಸೇರಿದ ಖಾಲಿ ಜಮೀನು ವೀಕ್ಷಣೆ ಆಗಮಿಸಿದ ಸಚಿವ ಶೆಟ್ಟರ್ ಅವ್ರು, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಬೆಳಗಾವಿಯಲ್ಲಿ ಶಾಂತಿ ವಾತಾವರಣ ಕದಡಿಲ್ಲಎಂದು ಹೇಳಿದರು. ಬೆಳಗಾವಿಯಲ್ಲಿ ಶಾಂತಿ ಎಲ್ಲಿ ಕದಡಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಮರು ಪ್ರಶ್ನಿಸಿದ್ರು. ಈ ಸಂದರ್ಭದಲ್ಲಿ ಘಟನೆಯನ್ನು ವಿವರಿಸಲು ಯತ್ನಿಸಿದ ಮಾಧ್ಯಮದವರ ಮಾತನ್ನು ಆಲಿಸದೆ ಸಚಿವರು ನಿರ್ಗಮಿಸಿದ್ರು.
-ಆರ್.ಶ್ರೀನಿವಾಸಮೂರ್ತಿ