ಮಂಗಳೂರು: ಇಂದು ರಾಜ್ಯಾದ್ಯಂತ ಮೆಡಿಕಲ್ ಕಾಲೇಜುಗಳಿಗೆ ಐಟಿ ಬಿಗ್ ಶಾಕ್ ನೀಡಿದೆ. ಆಸ್ಪತ್ರೆ, ಮೆಡಿಕಲ್ ಕಾಲೇಜ್ ಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ.
ಮಂಗಳೂರಿನ ಮೂವರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ ಮಾಡಿದ್ದಾರೆ. ಎ.ಜೆ. ಶೆಟ್ಟಿ, ಅಬ್ದುಲ್ಲಾ ಕುಂಞ ,ಕಣಚೂರು ಮೋನು ಮನೆ ಮೇಲೆ ಐಟಿ ದಾಳಿ ಅಧಿಕಾರಿಗಳು ಮಾಡಿದ್ದಾರೆ.
ಎ.ಜೆ. ಗ್ರೂಪ್ ಸಂಸ್ಥೆಯ ಮಾಲೀಕ ಎ.ಜೆ ಶೆಟ್ಟಿಗೆ ಐಟಿ ಬಿಗ್ ಶಾಕ್. ಯೆನಪೋಯ ಗ್ರೂಪ್ ಸಂಸ್ಥೆಯ ಮಾಲೀಕ ಅಬ್ದುಲ್ ಕುಂಞ. ಕಣಚೂರು ಗ್ರೂಪ್ ಸಂಸ್ಥೆಯ ಮಾಲೀಕ ಕಣಚೂರು ಮೋನು. ಮೂರೂ ಸಂಸ್ಥೆಗಳ ಮನೆ, ಆಸ್ಪತ್ರೆ, ಕಚೇರಿ ಮೇಲೆ ಏಕಕಾಲದಲ್ಲಿ 7 ಮಂದಿ ಅಧಿಕಾರಿಗಳ ತಂಡದಿಂದ ಶಿಕ್ಷಣ ಸಂಸ್ಥೆಗಳ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆಸಿದ್ದಾರೆ.
ಮಂಗಳೂರು ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡುವ ಮುನ್ನ ಮೆಗಾ ಪ್ಲ್ಯಾನ್ ಮಾಡಿ ದಾಳಿ ಮಾಡಿದ್ದಾರೆ. ಇಂಟರ್ ಸ್ಟೇಟ್ ಫುಟ್ಬಾಲ್ ಚಾಂಪಿಯನ್ ಶಿಪ್ ಗೆ ಅಂತ 60 ಬಾಡಿಗೆ ಕಾರುಗಳನ್ನು ಪಡೆದುಕೊಂಡಿದ್ದರು. ಕಾರಿನಲ್ಲಿ 60 ಫುಟ್ಬಾಲ್ ಆಟಗಾರರು ಬರುತ್ತಾರೆ ಎಂದು. ಐಟಿ ದಾಳಿಯನ್ನು ಗೌಪ್ಯವಾಗಿಡಲು ಮಾಸ್ಟರ್ ಪ್ಲ್ಯಾನ್ ಮಾಡಿದ ಅಧಿಕಾರಿಗಳು.