ಡಿಕೆಶಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್​ಗೆ ಐಟಿ ಶಾಕ್​..!

0
227

ಬೆಂಗಳೂರು : ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬೆನ್ನಲ್ಲೇ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್​ ಅವರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಪರಮೇಶ್ವರ್ ಒಡೆತನದ ತುಮಕೂರಿನಲ್ಲಿರುವ ಸಿದ್ದಾರ್ಥ್​ ಇಂಜಿನಿಯರಿಂಗ್ ಕಾಲೇಜು, ಪದವಿ ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ನೆಲಮಂಗಲದಲ್ಲಿರುವ ಪರಂ ಒಡೆತನದ ಮೆಡಿಕಲ್ ಕಾಲೇಜು, ಸದಾಶಿವನಗರದ ನಿವಾಸದ ಮೇಲೂ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.
ಈ ಬಗ್ಗೆ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಸಂಸ್ಥೆ ಮೇಲೆ ಐಟಿ ದಾಳಿ ಮಾಡಲಿ ಸಂತೋಷ. ನಮ್ಮಲ್ಲಿ ತಪ್ಪುಗಳಿದ್ರೆ ದಾಳಿ ಮಾಡಲಿ ಎಂದಿದ್ದಾರೆ.
ಅಷ್ಟೇ ಅಲ್ಲದೆ ಕೇಂದ್ರ ಮಾಜಿ ಸಚಿವ ಆರ್.ಎಲ್​ ಜಾಲಪ್ಪ ಒಡೆತನದ ಆಸ್ಪತ್ರೆ ಮೇಲೆ, ದೇವರಾಜ್​ ಅರಸ್ ಮೆಡಿಕಲ್ ಕಾಲೇಜು ಮೇಲೆ, ಜಾಲಪ್ಪ ಪುತ್ರ ರಾಜೇಂದ್ರ ನಿವಾಸದ, ನೆಲಮಂಗಲ ಪುರಸಭೆ ಜೆಡಿಎಸ್​ ಸದಸ್ಯ ಶಿವಕುಮಾರ್ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡಸಿದ್ದಾರೆ.

LEAVE A REPLY

Please enter your comment!
Please enter your name here