Homeರಾಜ್ಯ‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ ಎ‌ನಿಸಿಕೊಂಡಿವೆ. 

ಅದೇ ರೀತಿ ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮ ಪಂಚಾಯತಿ ಸಹ ಕೊರೋನಾ ತಡೆಗಟ್ಟುವಿಕೆಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಗ್ರಾಮದ ಪ್ರತಿ ಚಹಾದ‌ ಅಂಗಡಿಗಳಲ್ಲಿ ಬರುವ ಗ್ರಾಹಕರಿಗೆ ಉಚಿತ ಕಷಾಯ ನೀಡಿಕೆಗೆ ಮುಂದಾಗಿದ್ದಾರೆ. ಪ್ರಯತ್ನವೇನು ಹೇಳಿಕೊಳ್ಳುವಷ್ಟು ಹೊಸದಾಗಿ‌ ಅಲ್ಲದೇ ಇದ್ರೂ ಗ್ರಾಮ‌ ಪಂಚಾಯತಿ ಆಸಕ್ತಿ ಹಾಗೂ ಜನರ ಸಹಕಾರ ಇಲ್ಲಿ ಪ್ರಮುಖವಾಗಿದೆ.ಈ ಬಗ್ಗೆ ಚಹಾ ಅಂಗಡಿ ಮಾಲಿಕರ ಸಭೆ ಕರೆದು ಒಮ್ಮತದ ನಿರ್ಣಯ ಕೈಗೊಂಡಿದ್ದು, ಇಂದಿನಿಂದ ಗದಗ ಜಿಲ್ಲೆಯಲ್ಲಿ ಲಾಕ್ ಡೌನ್  ಸಡಿಲಿಕೆ ಕೂಡ ಪ್ರಾರಂಭವಾಗಿದೆ. ಇನ್ನು ಕೊರೋನಾ ತಡೆಗಟ್ಟುವಿಕೆಗೆ ಕಷಾಯ ಸೇವನೆ ಒಳ್ಳೆಯದು ಅನ್ನೋ ಹಿನ್ನೆಲೆ ಗ್ರಾಮ ಪಂಚಾಯತಿ ಕೊವಿಡ್ ಕಾರ್ಯಪಡೆಯಿಂದ ಕೊರೋನಾ ತಡೆಯಲು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಅಲ್ಲದೇ ಪ್ರತಿ ಚಹಾ ಅಂಗಡಿಯಲ್ಲಿ ಉಚಿತ ಕಷಾಯ ವಿತರಣೆಯನ್ನ ಪಂಚಾಯತಿ ಸಿಬ್ಬಂದಿ ಅಂಗಡಿಗಳಿಗೆ ತೆರಳಿ ಪರಿಶೀಲಿಸಲಿದ್ದಾರೆ. ಗ್ರಾಮದಲ್ಲಿ ವೃದ್ಧರು, ಯುವಕರು ಸೇರಿದಂತೆ ಚಹಾದ ಅಂಗಡಿಗೆ ಬರೋ ಪ್ರತಿ ಗ್ರಾಹಕರು ಚಹಾದ ಅಂಗಡಿಗೆ ಧಾವಿಸಿ ಕಷಾಯ ಕುಡಿಯುತ್ತಿದ್ದಾರೆ. ಗ್ರಾಮ ಪಂಚಾಯತಿ ನಿರ್ಧಾರಕ್ಕೆ  ಗ್ರಾಮಸ್ಥರು ಹಾಗೂ ಅಂಗಡಿ ಮಾಲೀಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments