ಇ್ರಸೋದಿಂದ ಮತ್ತೆರಡು ಉಪಗ್ರಹಗಳ ಯಶಸ್ವಿ ಉಡಾವಣೆ

0
210

ಇಸ್ರೋ ಗುರುವಾರ ರಾತ್ರಿ ಶ್ರೀಹರಿಕೋಟದಿಂದ ಪಿಎಸ್​ಎಲ್​​ವಿ ರಾಕೆಟ್​ ಮೂಲಕ ‘ಕಾಲಾಂ ಸ್ಯಾಟ್​ ಹಾಗೂ ಮೈಕ್ರೋಸ್ಯಾಟ್​​-ಆರ್​ ಎಂಬ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ರಾತ್ರಿ 11.37ಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು. ಇದರಲ್ಲಿ’ಕಾಲಾಂ ಸ್ಯಾಟ್​ ‘ಉಪಗ್ರಹವು ವಿದ್ಯಾರ್ಥಿಗಳಿಂದ ನಿರ್ಮಾಣಗೊಂಡಿದ್ದು, ಇದು ಕೇವಲ 1.26 ಕೆ.ಜಿ ಭಾರವಿದೆ. ಇದು ಜಗತ್ತಿನಲ್ಲೇ ಅತಿ ಹಗುರವಾದ ಉಪಗ್ರಹವಾಗಿದೆ. ಇದನ್ನು ಚೆನ್ನೈನ ‘ಸ್ಪೇಸ್​​ ಕಿಡ್ಸ್​’ ಎಂಬ ಖಾಸಗಿ ಸಂಸ್ಥೆಯ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.
ಹಾಗೆಯೇ ಉಡಾವಣೆಗೊಂಡ ಮತ್ತೊಂದು ಉಪಗ್ರಹ ‘ಮೈಕ್ರೋಸಾಟ್​​-ಆರ್’​​ ಅತ್ಯಾಧುನಿಕವಾಗಿದ್ದು 740 ಕೆ.ಜಿ ಭಾರ ಹೊಂದಿದೆ. ರಕ್ಷಣಾ ಶೋಧನೆಗಾಗಿ ಭೂಮಿಯ ಹೆಚ್ಚಿನ ರೆಸಲ್ಯೂಶನ್ ಫೋಟೋ ಸೆರೆ ಹಿಡಿಯಲು ತಂತ್ರಜ್ಞಾನ ಹೊಂದಿದೆ.

LEAVE A REPLY

Please enter your comment!
Please enter your name here