ಶಿವಮೊಗ್ಗ: ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟಕದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಒಂದು ಲೋಡ್ ಸ್ಪೋಟಕ ವಸ್ತುಗಳು ನಗರಕ್ಕೆ ಬಂದಿದ್ದು ಹೇಗೆ. ನಗರಕ್ಕೆ ಬರುವ ಮುನ್ನ ಎಷ್ಟು ಚೆಕ್ ಪೋಸ್ಟ್ ಗಳಲ್ಲಿ ಚೆಕ್ ಮಾಡಲಾಗಿದೆ ಎಂದು ಕೇಳಿದರು. ಘಟನೆಯ ಹೊಣೆ ಹೊತ್ತು ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿ ಎಂದು ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ್ ಕುಮಾರ್ ಆಗ್ರಹಿಸಿದ್ದಾರೆ.