ಸಿದ್ದರಾಮಯ್ಯ ಪೇಪರ್ ಟೈಗರ್: ಈಶ್ವರಪ್ಪ ವಾಗ್ದಾಳಿ

0
92

ಮೈಸೂರು: ಸಿದ್ದರಾಮಯ್ಯ ಒಬ್ಬ ಪೇಪರ್ ಟೈಗರ್ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಮೈಸೂರಲ್ಲಿ ಕೆ.ಎಸ್. ಈಶ್ವರಪ್ಪ ಟೀಕಾಪ್ರಹಾರ ನಡೆಸಿ, “ನನ್ನನ್ನು ಕಂಡರೆ ಸಿದ್ದರಾಮಯ್ಯ ಸಹನೆ  ಕಳೆದುಕೊಳ್ತಾರೆ. ಸಿದ್ದರಾಮಯ್ಯಗೆ ತಾಕತ್ತಿದ್ದರೆ ಬಾದಾಮಿ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿ. ನಾನು ಶಿವಮೊಗ್ಗದಲ್ಲಿ ರಾಜೀನಾಮೆ ನೀಡಿ ಸ್ಪರ್ಧಿಸುತ್ತೇನೆ” ಅಂತ ಸವಾಲು ಹಾಕಿದ್ದಾರೆ.

“ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಎರಡು ಕ್ಷೇತ್ರದಲ್ಲೂ  ಬಿಜೆಪಿ ಗೆಲ್ಲಲಿದೆ. ಬಿಜೆಪಿ ಗೆಲ್ಲಲಿಲ್ಲ ಅಂದ್ರೆ ನಾನು ರಾಜಕೀಯ ಸನ್ಯಾಸತ್ವ  ಪಡೆಯುತ್ತೇನೆ. ಸವಾಲ್ ಸ್ವೀಕರಿಸಿ. ಪೇಪರ್ ಟೈಗರ್ ರೀತಿ ಮಾತನಾಡಬೇಡಿ” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here